Virat Kohli | ಟೀಂ ಇಂಡಿಯಾದ ಟಾಪ್ 3 ರಲ್ಲಿ ವಿರಾಟ್ ಗಿಲ್ಲ ಸ್ಥಾನ
ಈ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದ ಟಾಪ್ 3 ಬ್ಯಾಟ್ಸ್‌ಮನ್‌ಗಳನ್ನು ಭಾರತ ತಂಡದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಆಯ್ಕೆ ಮಾಡಿದ್ದಾರೆ.
ಈ ಮೆಗಾ ಟೂರ್ನಮೆಂಟ್‌ನಲ್ಲಿ ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಟೀಂ ಇಂಡಿಯಾದಲ್ಲಿ ಅಗ್ರ ಮೂರು ಸ್ಥಾನಗಳಲ್ಲಿರಬೇಕು ಎಂದು ಸೆಹ್ವಾಗ್ ನಂಬಿದ್ದಾರೆ.
ಆದ್ರೆ ಭಾರತ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಸೆಹ್ವಾಗ್ ಕೈಬಿಟ್ಟಿದ್ದಾರೆ.

“ಭಾರತ ತಂಡವು ಬಹಳಷ್ಟು ಹಾರ್ಡ್ ಹಿಟ್ಟರ್‌ಗಳನ್ನು ಹೊಂದಿದೆ, ಆದ್ದರಿಂದ ಪಂದ್ಯವನ್ನು ಮುಗಿಸುವ ಬಗ್ಗೆ ಯೋಚಿಸುವ ಅಗತ್ಯವಿಲ್ಲ.
ಟೀಮ್ ಇಂಡಿಯಾ ಬ್ಯಾಟಿಂಗ್‌ಗೆ ಬಂದಾಗ, ರೋಹಿತ್ ಶರ್ಮಾ, ಇಶಾತ್ ಕಿಶನ್ ಮತ್ತು ಕೆಎಲ್ ರಾಹುಲ್ ಅವರು ಅಗ್ರ 3 ರಲ್ಲಿ ಇರಬೇಕು ಎಂದು ನಾನು ಭಾವಿಸುತ್ತೇನೆ.
ರೋಹಿತ್ ಶರ್ಮಾ ಮತ್ತು ಕಿಶನ್ ಒಟ್ಟಿಗೆ ಭಾರತದ ಇನ್ನಿಂಗ್ಸ್ ಆರಂಭಿಸಿದರೆ ಒಳ್ಳೆಯದು.
ಕಿಶನ್ ಜೊತೆಗೆ ರಾಹುಲ್ ಆರಂಭಿಕರಾಗಿ ತಂಡಕ್ಕೆ ಉತ್ತಮ ಆರಂಭ ಸಿಗಲಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.








