ಗೂಗಲ್ ಆಫರ್ – ಇಂಟರ್ನೆಟ್ ಇಲ್ಲದೆಯೂ ಕಳಿಸಿಬಹುದು gmail…
ಅತ್ಯಂತ ಜನಪ್ರಿಯ ಮೇಲಿಂಗ್ ಸೇವೆಯನ್ನ ನೀಡುತ್ತಿರುವ gmail ಬಳಕೆದಾರರಿಗೆ ಸಿಹಿ ಸುದ್ದಿಯನ್ನ ನೀಡುತ್ತಿದೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ 1.8 ಶತಕೋಟಿಗೂ ಹೆಚ್ಚು ಜನರು Gmail ಬಳಸುತ್ತಿದ್ದಾರೆ ಅದಕ್ಕಿಂತ ಹೆಚ್ಚಾಗಿ, ಸುಮಾರು 75 ಪ್ರತಿಶತ ಜನರು ತಮ್ಮ ಮೊಬೈಲ್ ಗಳಲ್ಲಿ ತಮ್ಮ Gmail ಅಕೌಂಟ್ ತೆರೆದಿರುತ್ತಾರೆ. ಇದನ್ನ ಗಮನದಲ್ಲಿಟ್ಟುಕೊಂಡು Google ಈಗ Gmail ಅನ್ನ ಆಫ್‌ಲೈನ್ ನಲ್ಲಿ ತೆರೆಯಬಹುದಾದ ಅಂದರೆ ಇಂಟರ್ನೆಟ್ ಇಲ್ಲದೆಯೂ ಮೇಲ್ ನೋಡುವ ಕಳುಹಿಸುವ ಸಾಮರ್ಥ್ಯವನ್ನು ಪ್ರಾರಂಭಿಸುತ್ತಿದೆ.
ಕ್ಯಾಲಿಫೋರ್ನಿಯಾ ಮೂಲದ ಟೆಕ್ ದೈತ್ಯ ಗೂಗಲ್ ನ ಬಳಕೆದಾರರು ಈಗ ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲದಿದ್ದರೂ ಸಹ ತಮ್ಮ Gmail ಸಂದೇಶಗಳನ್ನು ಓದಲು, ಪ್ರತಿಕ್ರಿಯಿಸಲು ಮತ್ತು ಹುಡುಕಲು ಸಾಧ್ಯವಾಗುತ್ತದೆ. ಇದು Google ನಿಂದ ಅದ್ಭುತ ಫೀಚರ್ ಆಗಿ ಹೊರಬರುತ್ತಿದೆ. ಕಡಿಮೆ ಸಂಪರ್ಕವಿರುವ ಅಥವಾ ಇಂಟರ್ನೆಟ್ ಇಲ್ಲದ ಸ್ಥಳಗಳಲ್ಲಿ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
Gmail ಆಫ್‌ಲೈನ್ ಅನ್ನು ಆನ್ ಮಾಡುವುದು ಸಹ ಸುಲಭ
ಮೊದಲು mail.google.com ಗೆ ಹೋಗಿ. ಲಾಗಿನ್ ಮಾಡಿಕೊಳ್ಳಬೇಕು. Gmail ಆಫ್‌ಲೈನ್ Google Chrome ನಲ್ಲಿ ಮಾತ್ರ ವರ್ಕ್ ಮಾಡುತ್ತದೆ ಮತ್ತು ನೀವು ಸಾಮಾನ್ಯ ಮೋಡ್‌ನಲ್ಲಿ ಬ್ರೌಸ್ ಮಾಡುತ್ತಿದ್ದರೆ ಮಾತ್ರ ಕಾರ್ಯನಿರ್ವಹಿಸುತ್ತದೆ, Incognito ಮೋಡ್ ನಲ್ಲಿ ವರ್ಕ್ ಆಗುವುದಿಲ್ಲ ಎಂದು Google ಹೇಳಿದೆ.
ಒಮ್ಮೆ ನೀವು ನಿಮ್ಮ ಇನ್ ಬಾಕ್ಸ್‌ಗೆ ಹೋದಮೇಲೆ ಸೆಟ್ಟಿಂಗ್ಸ್ ಗೆ ಹೋಗಿ ಆಫ್ಲೈನ್ ಮೋಡ್ ನ ಸಕ್ರಿಯಗಳಿಸಿಕೊಳ್ಳಬೇಕು.








