ಆಟೋ ಮೇಲೆ ಬಿದ್ದ ಹೈ ಟೆನ್ಶನ್ ವಿದ್ಯತ್ ತಂತಿ – 8 ಮಂದಿ ಸಜೀವ ದಹನ
ಹೈ ಟೆನ್ಷನ್ ವಿದ್ಯುತ್ ತಂತಿಗಳು ತುಂಡಾಗಿ ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಕನಿಷ್ಠ 8 ಮಂದಿ ಸಜೀವ ದಹನಗೊಂಡಿರುವ ಘಟನೆ ಆಂಧ್ರಪ್ರದೇಶದ ಸತ್ಯ ಸಾಯಿ ಬಳಿ ನಡೆದಿದೆ.
ಮೃತಪಟ್ಟವರೆಲ್ಲರೂ ಸತ್ಯಸಾಯಿ ಜಿಲ್ಲೆಯ ಚಿಲ್ಲಕೊಂಡಯ್ಯಪಲ್ಲಿಯಲ್ಲಿರುವ ಸಿಹಿ ಸುಣ್ಣದ ತೋಟದಲ್ಲಿ ಕೆಲಸ ಮಾಡಲು ಗುಂಡಂಪಲ್ಲಿಯಿಂದ ಪ್ರಯಾಣಿಸುತ್ತಿದ್ದ ಕೃಷಿ ಕಾರ್ಮಿಕರು ಎಂದು ಗುರುತಿಸಲಾಗಿದೆ.
5 persons were #charred to death, when their auto rickshaw caught #fire, after high tension electric wire fall on it, at #Tadimarri Mandal area of #SriSathyaSai dist of #AndhraPradesh.
All the passengers were caught in #Flames and #BurntAlive. All are farm labourers.#AutoFire pic.twitter.com/XBo8xDgYmC— Surya Reddy (@jsuryareddy) June 30, 2022
ಆಟೋ ದಲ್ಲಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು ಘಟನೆಯಲ್ಲಿ ಇಬ್ಬರು ವ್ಯಕ್ತಿ ಬದುಕುಳಿದಿದ್ದು ಧರ್ಮಾವರಂ ಪಟ್ಟಣದ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಹಲವು ದಿನಗಳಿಂದ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಹೈ ಟೆನ್ಶನ್ ವೈರ್ಗಳು ಜೋತು ಬಿದ್ದಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗುತ್ತಿದೆ.








