ಮರಾಷ್ಟ್ರದಲ್ಲಿ ಸಾಕಷ್ಟು ರಾಜಕೀಯ ಹೈಡ್ರಾಮಾದ ನಂತರ ಕೊನೆಗೂ ಮೈತ್ರಿ ಸರ್ಕಾರ ( ಮಹಾ ವಿಕಾಸ ಅಗಾಧಿ ) ಉರುಳಿದೆ.. ಈಗ ಮುಂದೆ ಸಿಎಂ ಯಾರು , ಡಿಸಿಎಂ ಯಾರು ಅನ್ನೋ ಚರ್ಚೆಯ ನಡುವೆಯೇ , ದೇವೇಂದ್ರ ಫಡ್ನವೀಸ್ ಮುಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಎನ್ನುತ್ತಿವೆ ಮೂಲಗಳು..
ಸರ್ಕಾರ ಉರುಳಲು ಪ್ರಮುಖ ಕಾರಣರಾದ ರೆಬೆಲ್ ಶಿವಸೇನಾ ನಾಯಕ ಏಕನಾಥ್ ಶಿಂಧೆ ಡಿಸಿಎಂ ಆಗಲಿದ್ದಾರೆ ಎಂದೇ ಹೇಳಲಾಗ್ತಿದೆ.. ವಿಶ್ವಾಸಮತಯಾಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಕೆಲವೇ ಗಂಟೆಗಳಲ್ಲಿ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಫಡ್ನವಿಸ್ ಮಹಾರಾಷ್ಟ್ರದ ಮುಂದಿನ ಸಿಎಂ ಎನ್ನುವ ಮಾತು ಕೇಳಿಬರುತ್ತಿದೆ.
ಠಾಕ್ರೆ ರಾಜೀನಾಮೆ ಬೆನ್ನಲ್ಲೇ ರಾಜ್ಯಪಾಲರ ಭೇಟಿಗೆ ದೇವೇಂದ್ರ ಫಡ್ನವಿಸ್ ಸಮಯ ಕೇಳಿದ್ದಾರೆ. ಇಂದು ಸಂಜೆ 4:30 ಕ್ಕೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ. ಫಡ್ನವಿಸ್ ಅವರು ಏಕನಾಥ್ ಶಿಂಧೆ ಜೊತೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಬಂಡಾಯ ಶಾಸಕರ ಸಹಿ ಪತ್ರದೊಂದಿಗೆ ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ನಾಯಕರು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.








