‘ನಾನು ಬಡವ ಕತ್ತು ಸೀಳಬೇಡಿ’ ಅಭಿಯಾನ : ಮಂಡ್ಯದಲ್ಲಿ ಕನ್ಹಯ್ಯ ಹತ್ಯೆ ಪ್ರಕರಣದ ವಿರುದ್ಧ ಹೋರಾಟ…
ಮಂಡ್ಯ : ಉದಯಪುರ ಟೈಲರ್ ಕನ್ಹಯ್ಯ ಲಾಲ್ ಭೀಕರ ಹತ್ಯೆ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು , ದೇಶಾದ ನಾನಾ ಭಾಗಗಳಲ್ಲಿ ಪ್ರಕರಣ ಖಂಡಿಸಿ ಪ್ರತಿಭಟನೆಗಳು ನಡೆದಿವೆ..
ಹತ್ಯೆ ಖಂಡಿಸಿ ಮಂಡ್ಯದಲ್ಲಿ ವಿಭಿನ್ನ ಅಭಿಯಾನ ಶುರುವಾಗಿದೆ… ವಿಭಿನ್ನ ಅಭಿಯಾನದ ಮೂಲಕ ಹೋರಾಟ ಮಾಡಲಾಗಿದೆ.. ‘ನಾನು ಬಡವ ನನ್ನ ಕತ್ತು ಸೀಳಬೇಡಿ’ ಎಂದು ಹಿಂದೂ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂಭಾಗದ ಹಿಂದೂ ವ್ಯಾಪಾರಸ್ಥರು ಈ ರೀತಿ ಬೋರ್ಡ್ ಹಿಡಿದು ಅಭಿಯಾನ ಮಾಡ್ತಿದ್ದಾರೆ. ನಾನು ಸತ್ಯ ಹೇಳಲ್ಲ, ಸತ್ಯ ಹೇಳುವವರ ಪರವೂ ನಿಲ್ಲಲ್ಲ ಎಂದು ಬೋರ್ಡ್ ಪ್ರದರ್ಶಿಸುತ್ತಿದ್ದಾರೆ,.
ನಾನು ಬಡವ ನನ್ನ ಕತ್ತು ಸೀಳಬೇಡಿ ಎಂದು ಬರೆದಿರುವ ನಾಮಫಲಕ ಹಿಡಿದು ಅಭಿಯಾನ ನಡೆಸುತ್ತಿದ್ದಾರೆ..