ಮಣಿಪುರದ ಇತಿಹಾಸದಲ್ಲೇ ಭೀಕರ ಭೂಸಿತ – 81 ಮಂದಿ ಸಾವು
ಭಾರಿ ಮಳೆಯಿಂದಾಗಿ ಮಣಿಪುರದಲ್ಲಿ ಸಂಭವಿಸಿದ ಭೂಕುಸಿತದಿಂದ ಒಟ್ಟು 81 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ಮಣಿಪುರ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭೀಕರ ದುರ್ಘಟನೆಯಾಗಿದೆ ಘಟನೆಯಾಗಿದೆ.
ಮಣ್ಣಿಪುರದ ಇತಿಹಾಸದಲ್ಲೇ ಸಂಭವಿಸಿದ ಭೀಕರ ಭೂಕುಸಿತ ಇದು ಎಂದು ಮುಖ್ಯಮಂತ್ರಿ ಎನ್ ಬಿರೇನ್ ಹೇಳಿದ್ದಾರೆ. ಶಿಬಿರದ ಮೇಲೆ ಕೆಸರಿನ ಗುಡ್ಡವೇ ಬಿದ್ದಿರುವುದರಿಂದ ಶವಗಳನ್ನು ಹೊರತೆಗೆಯಲು ಎರಡು ಮೂರು ದಿನಗಳು ಬೇಕಾಗುತ್ತವೆ ಎಂದು ಬೀರನ್ ಹೇಳಿದರು.
ಶುಕ್ರವಾರ ಮಣಿಪುರದ ತುಪುಲ್‌ನಲ್ಲಿ ಭೂಕುಸಿತ ಸಂಭವಿಸಿದ ಸ್ಥಳದಿಂದ 8 ಸೇನಾ ಸಿಬ್ಬಂದಿ ಮತ್ತು ನಾಲ್ವರು ನಾಗರಿಕರು ಸೇರಿದಂತೆ 12 ಮೃತದೇಹಗಳನ್ನು ಶೋಧ ಕಾರ್ಯಾಚರಣೆಯಲ್ಲಿ ಹೊರತಗೆಯಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ತುಪುಲ್ ರೈಲು ನಿಲ್ದಾಣದ ಬಳಿ ಭೂಕುಸಿತ ಸಂಭವಿಸಿದ್ದು, ಜಿರಿಬಾಮ್‌ನಿಂದ ಇಂಫಾಲ್‌ಗೆ ನಿರ್ಮಾಣ ಹಂತದಲ್ಲಿರುವ ರೈಲು ಮಾರ್ಗವನ್ನು ರಕ್ಷಿಸಲು ಭಾರತೀಯ ಸೇನೆಯನ್ನು ನಿಯೋಜಿಸಲಾಗಿತ್ತು. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಜಿರಿಬಾಮ್-ಇಂಫಾಲ್ ಹೊಸ ಮಾರ್ಗ ಯೋಜನೆಯ ಟುಪಲ್ ನಿಲ್ದಾಣದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಈಶಾನ್ಯ ಗಡಿ ರೈಲ್ವೆ ಸಿಆರ್‌ಒ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಮತ್ತು ಸೇನಾ ಸಿಬ್ಬಂದಿಗಳನ್ನ ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಿ ಕೊಟ್ಟಿದೆ. ಮಣಿಪುರದಲ್ಲಿ ನಿರಂತರ ಮಳೆಯಿಂದ ಉಂಟಾದ ಭೂಕುಸಿತದ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗೆ ಸಚಿವ ನರೇಂದ್ರ ಮೋದಿ ಗುರುವಾರ ಪರಿಶೀಲಿಸಿದರು. ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.








