ಕೆ.ಎನ್. ರಾಜಣ್ಣ ಒಬ್ಬ ಅನಾಗರಿಕ.. ಜುಲೈ 3 – 4 ರಂದು ಮಂಡ್ಯದಲ್ಲಿ ಪ್ರತಿಭಟನೆ
ಕೆ.ಎನ್. ರಾಜಣ್ಣ ಒಬ್ಬ ಅನಾಗರೀಕ. ಇಂಥವರು ಸಾರ್ವಜನಿಕ ಜೀವನದಲ್ಲಿ ಇರೋಕೆ ಲಾಯಕ್ಕಿಲ್ಲ. ಕಾಂಗ್ರೆಸ್ ಪಕ್ಷ ಅವರನ್ನು ಉಚ್ಛಾಟನೆ ಮಾಡಿದ್ರೆ ಆ ಪಕ್ಷಕ್ಕೂ ಗೌರವ ಬರುತ್ತೆ ಎಂದು ಮಾಜಿ ಎಮ್ ಎಲ್ ಸಿ ಕೆ.ಟಿ. ಶ್ರೀಕಂಠೇಗೌಡ
ಅವರು ಮಂಡ್ಯದಲ್ಲಿ ಹೇಳಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್. ರಾಜಣ್ಣ ಮಾಡಿರುವ ಅವ್ಯಹಾರಗಳು ಎಲ್ಲವೂ ಗೊತ್ತಿದೆ. ಇಂಥವರಿಂದ ದೇವೇಗೌಡರು ಪಾಠ ಕಲಿಯುವ ಅಗತ್ಯವಿಲ್ಲ. ಕೆ.ಎನ್. ರಾಜಣ್ಣ ಅವರು ದೇವೇಗೌಡರ ಬಗ್ಗೆ ಮಾತನಾಡಿರೋದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೆ ಜುಲೈ 3ರಂದು ಮಂಡ್ಯ, ನಾಗಮಂಗಲ, ಮಳವಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಹಾಗೇ ಜುಲೈ 4ರಂದು ಮದ್ದೂರು ಶ್ರೀರಂಗಪಟ್ಟಣದಲ್ಲಿ ಕೆ.ಎನ್. ರಾಜಣ್ಣ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದ್ರು.