God Father Movie : ಚಿರಂಜೀವಿ “ಗಾಡ್ ಫಾದರ್” ಫಸ್ಟ್ ಲುಕ್ ರಿಲೀಸ್
ಮೆಗಾಸ್ಟಾರ್ ಚಿರಂಜೀವಿ ಗಾಡ್ ಫಾದರ್ ಬರುವಿಕೆ ವೇದಿಕೆ ಸಿದ್ಧವಾಗಿದೆ.
ಮೋಹನ್ ರಾಜಾ ನಿರ್ದೇಶನವಹಿಸಿರುವ ಈ ಸಿನಿಮಾ ಕೊಣಿದೆಲಾ ಸುರೇಖ ಸಮರ್ಪಣೆಲ್ಲಿ ಆರ್ ಬಿ ಚೌದರಿ, ಎನ್ ವಿ ಪ್ರಸಾದ್ ನಿರ್ಮಿಸಿದ್ದಾರೆ.
ಸೋಮವಾರ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ವಿಡಿಯೋ ಕೂಡ ರಿಲೀಸ್ ಆಗಿದೆ.
ಪೋಸ್ಟರ್ ನಲ್ಲಿ ಚಿರು ಗಂಭೀರವಾಗಿದೆ.
ಇನ್ನು ವಿಡಿಯೋದಲ್ಲಿ ರಸ್ತೆತುಂಬೆಲ್ಲಾ ಜನರಿದ್ದು, ಅವರ ನಡುವೆ ಕಾರು ಬಂದು ನಿಲ್ಲುತ್ತದೆ.
ಅದರಿಂದ ಚಿರು ಸ್ಟೈಲಿಷ್ ಆಗಿ ಇಳಿಯುತ್ತಾರೆ. ಅವರ ನಡಿಗೆಗೆ ತಕ್ಕಂತೆ ತಮನ್ ಸಂಗೀತ ನೀಡಿದ್ದಾರೆ.
ಚಿರಂಜೀವಿ ಅವರಿಗೆ ಇದು 153ನೇ ಸಿನಿಮಾವಾಗಿದೆ.
ಇದರಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ನಯನ ತಾರಾ, ಸತ್ಯದೇವ್, ನಿರ್ದೇಶಕ ಪೂರಿ ಜಗನ್ನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ದಸರಾಗೆ ರಿಲೀಸ್ ಆಗಲಿದೆ.