Dinesh Karthik | ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಕುತ್ತು ?
ಎಡ್ಜ್ ಬಾಸ್ಟನ್ ನಲ್ಲಿ ಇಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ 20 ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮೊದಲ ಪಂದ್ಯದಲ್ಲಿ 50 ರನ್ ಗಳಿಂದ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ.
ಇತ್ತ ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಸೋತು ಗಾಯಗೊಂಡ ಹುಲಿಯಂತಾಗಿದೆ. .
ಇಂದಿನ ಪಂದ್ಯ ಇಂಗ್ಲೆಂಡ್ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಟೀಂ ಇಂಡಿಯಾದಲ್ಲಿ ಭಾರಿ ಬದಲಾವಣೆಗಳು ನಿರೀಕ್ಷೆ ಮಾಡಲಾಗಿದೆ.
ಯಾಕೆಂದರೇ ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಜಸ್ ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಂಡಕ್ಕೆ ವಾಪಸ್ ಆಗಿದ್ದಾರೆ.
ಹೀಗಾಗಿ ಮೊದಲ ಪಂದ್ಯದಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದ ಯುವ ಆಟಗಾರರು ತಂಡದಿಂದ ಹೊರಗುಳಿುವ ಸಾಧ್ಯತೆಗಳಿವೆ.
ಮುಖ್ಯವಾಗಿ ಜಸ್ ಪ್ರೀತ್ ಬುಮ್ರಾ ವಾಪಸ್ ಆಗಿರುವುದರಿಂದ ಅರ್ಷದೀಪ್ ಸಿಂಗ್ ಸ್ಥಾನ ಕಳೆದುಕೊಳ್ಳಬಹುದು.
ವಿರಾಟ್ ಕೊಹ್ಲಿಗಾಗಿ ಭರ್ಜರಿ ಫಾರ್ಮ್ ನಲ್ಲಿರುವ ದೀಪಕ್ ಹೂಡಾ ಸ್ಥಾನ ಬಿಟ್ಟುಕೊಡುವ ಸಾಧ್ಯತೆಗಳಿವೆ.
ಅಕ್ಷರ್ ಪಟೇಲ್ ಜಾಗದಲ್ಲಿ ರವೀಂದ್ರ ಜಡೇಜಾ ಆಡುವ ಸಾಧ್ಯತೆಗಳಿವೆ.
ಆದ್ರೆ ವಿಕೆಟ್ ಕೀಪರ್ ರಿಶಬ್ ಪಂತ್ ಗಾಗಿ ಯಾರು ಸ್ಥಾನ ಬಿಟ್ಟುಕೊಡುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಒಂದು ವೇಳೆ ರಿಷಬ್ ಪಂತ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡರೇ ಇಶಾನ್ ಕಿಶನ್ ಅಥವಾ ದಿನೇಶ್ ಕಾರ್ತಿಕ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಈ ಪೈಕಿ ಇಶಾನ್ ಕಿಶನ್ ಆರಂಭಿಕ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.
ಲೆಫ್ಟ್ – ರೈಟ್ ಕಾಂಬಿನೇಷನ್ ನಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯುವ ಇರಾದೆಯಲ್ಲಿದೆ.
ಹೀಗಾಗಿ ಇಶಾನ್ ಗೆ ಕೋಕ್ ಕೊಡುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ.
ಇನ್ನು ದಿನೇಶ್ ಕಾರ್ತಿಕ್ ಕೂಡ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಫಿನಿಷರ್ ಪಾತ್ರ ವಹಿಸಿದ್ದಾರೆ.
ಕಳೆದ ಏಳು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ 70 ಎಸೆತಳನ್ನು ಎದುರಿಸಿ ಒಟ್ಟು 108 ರನ್ ಗಳನ್ನು ಕಲೆಹಾಕಿದ್ದಾರೆ.
ಇದನ್ನ ನೋಡಿದ್ರೆ ಟೀ ಇಂಡಿಯಾ ಪರ ದಿನೇಶ್ ಕಾರ್ತಿಕ್ ಫಿನಿಶಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಮುಂದಿನ ಟಿ 20 ವಿಶ್ವಕಪ್ ದೃಷ್ಠಿಯಿಂದ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ಇರಬೇಕು ಎಂದು ಸಾಕಷ್ಟು ಹಿರಿಯ ಕ್ರಿಕೆಟಿಗರು ವಾದಿಸುತ್ತಿದ್ದಾರೆ.
ಆದ್ರೆ ಒಂದೇ ತಂಡದಲ್ಲಿ ಮೂವರು ವಿಕೆಟ್ ಕೀಪರ್ ಗಳು ಇರಲು ಹೇಗೆ ಸಾಧ್ಯ..? ಅನ್ನೋ ಪ್ರಶ್ನೆ ಕೂಡ ಇಲ್ಲಿ ಉದ್ಭವವಾಗಿದೆ.
ಆದ್ರೂ ಟೀಂ ಇಂಡಿಯಾದ ಭವಿಷ್ಯದ ದೃಷ್ಠಿಯಿಂದ ರಿಷಬ್ ಪಂತ್ ಗೆ ಟೀಂ ಮ್ಯಾನೇಜ್ ಮೆಂಟ್ ಮಣೆ ಹಾಕುವ ಸಾಧ್ಯತೆಗಳಿವೆ.
ಹೀಗಾಗಿ ದಿನೇಶ್ ಕಾರ್ತಿಕ್ ತಂಡದಿಂದ ಹೊರಬೀಳುವ ಸಾಧ್ಯತೆಗಳಿವೆ.
ಇನ್ನು ತಂಡದಲ್ಲಿ ಫಿನಿಷರ್ ಪಾತ್ರ ನಿಭಾಯಿಸಲು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಇದ್ದಾರೆ.
ಈ ಹಿನ್ನೆಲೆಯಲ್ಲಿ ನೋಡಿದ್ರೆ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಂದಾಜಿಸಲಾಗುತ್ತಿದೆ.