ಬಳ್ಳಾರಿ- ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿನ ಆರ್ಭಟ ಶುರುವಾಗಿದೆ. ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಪೊಲೀಸ್ ಪೇದೆ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಜೆಗೆ ಎಂದು ಪೊಲೀಸ್ ಪೇದೆ ದಾವಣಗೆರೆಗೆ ಹೋಗಿ ಬಂದಿದ್ದರು. ಇದೀಗ ಅವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗಾಗಿ ಅವರ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಅಲ್ಲದೆ ಜಿಲ್ಲೆಯ ವಿವಿಧ ಕಡೆ ಇಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಹರಪನಹಳ್ಳಿ ತಾಲೂಕಿನಲ್ಲಿ ಒಂದು ಪ್ರಕರಣ, ಹೊಸಪೇಟೆ ಎಂಟು, ಮುದ್ಲಾಪುರದ ಒಂದು, ಕೊಟ್ಟೂರು ಪಟ್ಟಣದಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಕೇಸಸ್ ಪತ್ತೆಯಾಗಿವೆ. ಇವರೆಲ್ಲರ ಸಂಪರ್ಕದಲ್ಲಿರೋರನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನೂ ಈ ಎಲ್ಲಾ ಪ್ರಕರಣಗಳು ಸೇರಿಸಿ ಬಳ್ಳಾರಿಯಲ್ಲಿ 51 ಕೊರೊನಾ ಪಾಸಿಟಿವ್ ಕೇಸಸ್ ಆಗಿವೆ ಎಂದು ಹೇಳಿದರು.








