ಚೀನಾದ ಕೊರೊನಾ ವೈರಸ್ ಭಾರತದ ಆಮದಿಗೆ ಬ್ರೇಕ್ ಆಗಿದೆ. ಕೊರೊನಾ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಭಾರತ ಚೀನಾ ವಸ್ತುಗಳ ಆಮದಿಗೆ ತಡೆಹಿಡಿದಿದೆ. ಹೀಗೆ ತಾತ್ಕಾಲಿಕ ತಡೆ ಹಿನ್ನೆಲೆ ಇದೇ ಮಾರ್ಚ್ ತಿಂಗಳಿಂದ ಔಷಧಿಗಳ ಬೆಲೆ ಗಗನಕ್ಕೇರಲಿದೆ ಎನ್ನಲಾಗಿದೆ.
ಈ ಬಗ್ಗೆ ಫೆಡರೇಶನ್ ಆಫ್ ಇಂಡಿಯಾ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಮಾಹಿತಿ ಕಲೆಹಾಕಿದೆ. ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪ್ಯಾರಸಿಟಮಾಲ್, ಐಬ್ರುಫಿನ್ ನಂತಹ ಔಷಧಗಳಲ್ಲಿ ಕೊರತೆ ಉಂಟಾಗಲಿದೆ ಎಂದು ತಿಳಿಸಿದೆ.
ಚೀನಾದಿಂದ ಆಮದು ಸ್ಥಗಿತಗೊಂಡ ಕಾರಣ ಔಷಧಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಕೊರತೆಯಾಗಿದೆ. ಈ ತಿಂಗಳ ಅಂತ್ಯಕ್ಕೆ ಪ್ಯಾರಸಿಟಮಾಲ್ ಸೇರಿದಂತೆ ಹಲವು ಮೆಡಿಸನ್ ಗಳ ಕೊರತೆ ಉಂಟಾಲಿದ್ದು, ಸಾರ್ವಜನಿಕರಿಗೆ ಉಪಯೋಗಕ್ಕೆ ಲಭ್ಯವಾಗುವುದಿಲ್ಲ ಎಂದು ಹೇಳಲಾಗಿದೆ.








