ಮತ್ತೆ CM ಆಗುವ ಆಸೆ ಬಿಚ್ಚಿಟ್ಟ Siddaramaiah
ಬಾಗಲಕೋಟೆ : ರಾಜ್ಯ ಕಾಂಗ್ರೆಸ್ ನಲ್ಲಿ ಚುನಾವಣೆಗೂ ಮುನ್ನಾವೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಚರ್ಚೆ ಮುನ್ನಲೆಗೆ ಬಂದಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಾಗ ನಾನೇ ಮುಂದಿನ ಮುಖ್ಯಮಂತ್ರಿ ಅಂತಾ ಪರೋಕ್ಷವಾಗಿ ಹೇಳುತ್ತಲೇ ಇದ್ದಾರೆ.
ಇದೀಗ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಆಸೆಯನ್ನ ಸಿದ್ದರಾಮಯ್ಯ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಅವರನ್ನ ಬಾಗಲಕೋಟೆಯಲ್ಲಿ ನೇಕಾರರು ಭೇಟಿ ಮಾಡಿದ್ದರು.
ಈ ವೇಳೆ ಸಾಲ, ವಿದ್ಯುತ್ ಬಿಲ್ ವಿಚಾರವಾಗಿ ಸಿದ್ದರಾಮಯ್ಯ ಜೊತೆ ಮಾತನಾಡಿದ್ರು.
ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ, ಇನ್ನೊಮ್ಮೆ ಗೆದ್ದರೇ ನೇಕಾರರು, ವಿದ್ಯುತ್ ಬಿಲ್ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇನ್ನೊಂದು ಸಾರಿ ನಾನು ಅಧಿಕಾರಕ್ಕೆ ಬಂದರೇ ವಿದ್ಯುತ್ ಬಿಲ್ ಝೀರೋ ಮಾಡುತ್ತೇನೆ.
ಬಜೆಟ್ ನಲ್ಲಿ ನೇಕಾರರ ಎಲ್ಲಾ ಸಾಲ ಜೀರೋ ಅಂತಾ ಬರೆಯುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.