Monsoon Session – ಇಂದಿನಿಂದ ಸಂಸತ್ ಅಧಿವೇಶನ – ಕಾಳಜಿ, ಜವಬ್ದಾರಿಂದ ಭಾಗವಹಿಸುವಂತೆ ಪ್ರಧಾನಿ ಕರೆ
ಇಂದಿನಿಂದ ಸಂಸತ್ ಅಧಿವೇಶನ Monsoon Session ಶುರುವಾಗಿದೆ. ಸಂಸತ್ತಿನಲ್ಲಿ ಇತ್ತೀಚೆಗಷ್ಟೆ ನಿಧನರಾದ ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಭೆ ಅವರಿಗೆ ಸಂಸತ್ತನಲ್ಲಿ ಗೌರವ ನಮನ ಸಲ್ಲಿಸಲಾಯಿತು.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇದ್ರ ಮೋದಿ ದೇಶಕ್ಕೆ ಹೊಸ ಶಕ್ತಿ ತುಂಬಲು ಸಂಸದರು ಮಾಧ್ಯಮವಾಗಬೇಕು ಎಂದು ಕರೆ ನೀಡಿದ್ದಾರೆ. ಈ ಅಧಿವೇಶನ ಅತ್ಯಂತ ಮಹತ್ವದ್ದಾಗಿದೆ. ಎಲ್ಲಾ ಸಂಸತ್ ಸದಸ್ಯರು ಕಾಳಜಿಯಿಂದ ಜವಾಬ್ದಾರಿ ನಿರ್ವಹಿಸುವ ಮೂಲಕ ದೇಶಕ್ಕೆ ಇನ್ನಷ್ಟು ಶಕ್ತಿ ತುಂಬಬೇಕು ಎಂದರು.
ರಾಷ್ಟ್ರಪತಿ ಚುನಾವಣೆ ನಡೆಯುತ್ತಿರುವ ಸುಸಂದರ್ಭವಿದು. ಈ ಯುಗ ನಮಗೆ ಹೊಸ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯನ್ನು ನೀಡಲಿದೆ. ಎಲ್ಲರೂ ಜೊತೆಯಾಗಿ ದೇಶವನ್ನು ಇನ್ನಷ್ಟು ಬಲಪಡಿಸೋಣ ಎಂದು ಆತ್ಮಸ್ಥೈರ್ಯ ತುಂಬಿದರು.
ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಅಂದರೆ ಇಂದಿನಿಂದ ಪ್ರಾರಂಭಗೊಂಡಿದ್ದು ಆಗಸ್ಟ್ 12 ರಂದು ಮುಕ್ತಾಯಗೊಳ್ಳುತ್ತದೆ.
Urging all MPs to contemplate deeply and discuss, says PM as Monsoon Session gets underway