ಏಕದಿನ ಪಂದ್ಯಗಳಿಗೆ ವಿದಾಯ ಘೋಷಿಸಿದ ಇಂಗ್ಲೆಂಡ್ ಅಲ್ರೌಂಡರ್ ಬೆನ್ ಸ್ಟೋಕ್
ಏಕದಿನ ಪಂದ್ಯಗಳಿಗೆ ಇಂಗ್ಲೆಂಡ್ ಅಲ್ರೌಂಡರ್ ಬೆನ್ ಸ್ಟೋಕ್ ವಿದಾಯ ಘೋಷಿಸಿದ್ದಾರೆ. ಮಂಗಳವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯದ ನಂತರ ODI ಮಾದರಿಯಿಂದ ನಿವೃತ್ತಿ ಹೊಂದುವುದಾಗಿ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಇದುವರೆಗೆ 104 ಏಕದಿನ ಪಂದ್ಯಗಳನ್ನ ಇಂಗ್ಲೆಂಡ್ ಗಾಗಿ ಆಡಿದ್ದಾರೆ. 31ರ ಹರೆಯದ ಸ್ಟೋಕ್ಸ್ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಫೈನಲ್‌ನಲ್ಲಿ ಪಂದ್ಯದಲ್ಲಿ 84 ರನ್ ಗಳಿಸಿ ಇಂಗ್ಲೆಂಡ್ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲಲು ಬಹುಮುಖ್ಯ ಪಾತ್ರ ವಹಿಸಿದ್ದರು.
https://twitter.com/benstokes38/status/1548992324939616258
Ben Stokes to retire from ODI cricket
ಬೆನ್ ಸ್ಟೋಕ್ಸ್ ಐರ್ಲೆಂಡ್ ವಿರುದ್ಧ 2011 ರಲ್ಲಿ ತಮ್ಮ ODI ಚೊಚ್ಚಲ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು ಇಲ್ಲಿಯವರೆಗೆ 2919 ರನ್ ಗಳಿಸಿದ್ದು, 74 ವಿಕೆಟ್‌ಗಳು ಅವರ ಹೆಸರಿನಲ್ಲಿ ದಾಖಲಾಗಿವೆ.








