3 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದ 3.92 ಲಕ್ಷ ಮಂದಿ…
ಕಳೆದ ಮೂರು ವರ್ಷಗಳಲ್ಲಿ 3.92 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನ ತ್ಯಜಿಸಿದ್ದಾರೆ ಮತ್ತು ಅವರಲ್ಲಿ 1.70 ಲಕ್ಷ ಜನರು ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ ಎಂದು ಲೋಕಸಭೆಯ ಕಲಾಪದಲ್ಲಿ ತಿಳಿಸಲಾಗಿದೆ.
ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ಹಾಜಿ ಫಜ್ಲುರ್ ರೆಹಮಾನ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ (MoS) ನಿತ್ಯಾನಂದ ರೈ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿದೇಶಾಂಗ ಸಚಿವಾಲಯ ನೀಡಿರುವ ವಿವರಗಳ ಪ್ರಕಾರ, ವ್ಯಕ್ತಿಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಮತ್ತು 120 ಕ್ಕೂ ಹೆಚ್ಚು ದೇಶಗಳಲ್ಲಿ ಪೌರತ್ವವನ್ನ ಪಡೆದಿದ್ದಾರೆ. 2019, 2020 ಮತ್ತು 2021 ರಲ್ಲಿ ಒಟ್ಟು 3,92,643 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇವರಲ್ಲಿ 1,70,795 ಜನರು ಅಮೆರಿಕದ ಪೌರತ್ವವನ್ನು ತೆಗೆದುಕೊಂಡಿದ್ದಾರೆ, ಕೆನಡಾದಲ್ಲಿ 64,071, ಆಸ್ಟ್ರೇಲಿಯಾದಲ್ಲಿ 58,391, ಯುನೈಟೆಡ್ ಕಿಂಗ್‌ಡಂನಲ್ಲಿ 35,435, ಇಟಲಿಯಲ್ಲಿ 12,131, ನ್ಯೂಜಿಲೆಂಡ್‌ನಲ್ಲಿ 8,882, ಸಿಂಗಾಪುರದಲ್ಲಿ 7,046, ಜರ್ಮನಿಯಲ್ಲಿ 6,690, ಜರ್ಮನಿಯಲ್ಲಿ 6,690, ಸ್ವೀಡನ್‌ನಲ್ಲಿ 3,754 ಮತ್ತು ಇತರ 48 ಮಂದಿ ಪೌರತ್ವ ಪಡೆದಿದ್ದಾರೆ.








