ನಕಲಿ ಖಾತೆ ಸೃಷ್ಟಿಸಿ ಕೊಡಗಿ ಕಾವೇರಿ ಮಾತೆಗೆ ಅವಮಾನ – ಯುವಕ ಅರೆಸ್ಟ್
ಕೊಡಗು – ಇನ್ಸ್ಟ್ರಾಗ್ರಾಂ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಕುಲದೇವಿ ಕಾವೇರಿ ಮತ್ತು ಕೊಡವ ಹೆಣ್ಣುಮಕ್ಕಳನ್ನು ಅವಮಾನಿಸಿ ಪೋಸ್ಟ್ ಹಾಕಿದ ಕೊಡಗಿನ ಹಿಂದೂ ಯುವಕನನ್ನು ಅರೆಸ್ಟ್ ಮಾಡಲಾಗಿದೆ.
ಕೊಡವರ ಆರಾಧ್ಯ ದೇವತೆ ಕಾವೇರಮ್ಮ ಮಾತೆ ಮತ್ತು ಕೊಡವ ಸಮುದಾಯದ ಹೆಣ್ಣು ಮಕ್ಕಳನ್ನ ಅವಮಾನ ಮಾಡಿ ತುಚ್ಛವಾಗಿ ಪೋಸ್ಟ್ ಹಾಕಿದ ಯುವಕನೋರ್ವನನ್ನು ಕೊಡಗಿನ ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಂ ಫೇಕ್ ಅಕೌಂಟ್ ಸೃಷ್ಟಿ ಮಾಡಿದ್ದು, ಹಿಂದೂ ಯುವಕ ಎಂದು ತಿಳಿದು ಬಂದಿದೆ. ಸಿದ್ದಾಪುರದ ಯುವಕ ಮೊಹಮದ್ ಅಷ್ಫಾಕ್ ಎಂಬ ವಿದ್ಯಾರ್ಥಿಯ ಹೆಸರಿನಲ್ಲಿ ಫೇಕ್ ಅಕೌಂಟ್ ಸೃಷ್ಟಿ ಮಾಡಿ ತಾಯಿ ಕಾವೇರಿ ಮತ್ತು ಕೊಡವ ಹೆಣ್ಣು ಮಕ್ಕಳ ಬಗ್ಗೆ ಪೋಸ್ಟ್ ಹಾಕಿದ್ದ. ಪೋಸ್ಟ್ ಗಳು ವೈರಲ್ ಆದ ನಂತರ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನೈಜ ಅಪರಾಧಿಯನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು.
ಕೊಡಗಿನ ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಫೇಸ್ ಬುಕ್ ಮುಂಬೈ ಕಚೇರಿ ಬಳಿಕ ಕ್ಯಾಲಿಫೋರ್ನಿಯಾದಲ್ಲಿರುವ ಮುಖ್ಯ ಕಚೇರಿ ಸಂಪರ್ಕಿಸಿ ನೈಜ ಅಪರಾಧಿಯನ್ನು ಬಂಧಿಸಿದ್ದಾರೆ. ಅಪರಾಧಿ ಯುವಕ ವಿರಾಜಪೇಟೆ ಸಮೀಪದ ಕೆದಮುಳ್ಳೂರ ಸಮೀಪ ನಿವಾಸಿ ದಿವಿನ್ ದೇವಯ್ಯ ಎನ್ನಲಾಗಿದ್ದು ಮನೆ ಹೆಸರು ಇನ್ನಷ್ಟೇ ತಿಳಿಯಬೇಕಿದೆ.








