ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಮತ್ತೊಮ್ಮೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡ್ತಿದೆ.. ರಾಜಕೀಯ ಹಾಗೂ ಸಿನಿಮಾರಂಗ ಎರೆಡರಲ್ಲೂ ತೊಡಗಿಸಿಕೊಂಡಿರುವ ‘ಗಬ್ಬರ್ ಸಿಂಗ್’ ಪವನ್ ಕಲ್ಯಾಣ್ ಅವರಿಗೆ ಅನಾರೋಗ್ಯವಾಗಿರೋದು ನಿಜವೇನಾ ವದಂತಿಯ ಎಂಬ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ..
ವಿಶ್ರಾಂತಿ ಕೊರತೆಯಿಂದ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ ಎನ್ನಲಾಗ್ತಿದೆ.. ಮೊದಲಿನಿಂದಲೂ ಪವನ್ ಬೆನ್ನು ನೋವಿನಿಂದ ಬಳಲುತ್ತಿದ್ದರು. ಎರಡು ದಿನಗಳ ಹಿಂದೆ ಅಭಿಮಾನಿಯೊಬ್ಬ ಗುಂಪಿನಿಂದ ಜಿಗಿದು ಪವನ್ ನನ್ನು ಹಿಡಿಯಲು ಯತ್ನಿಸಿದ್ದ. ಅಭಿಮಾನಿಯ ಎಡವಟ್ಟಿನಿಂದ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರು ಪೇರುಂಟಾಗಿರುವ ಸುದ್ದಿ ಹರಿದಾಡುತ್ತಿದೆ..
ಆದ್ರೆ ಇದು ವದಂತಿ ಅಷ್ಟೇ ಅಧಿಕೃತವಾಗಿಲ್ಲ..








