ಹೊಸ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಕಾರ್ ಭಾರತದಲ್ಲಿ ಅನಾವರಣ…
ಮಾರುತಿ ಸುಜುಕಿ ತನ್ನ ಹೊಸ ಕಾರು ಮಾರುತಿ ಸುಜುಕಿ ಗ್ರಾಂಡ್ ವಿಟಾರಾವನ್ನು ಬುಧವಾರ ಭಾರತದಲ್ಲಿ ಅನಾವರಣಗೊಳಿಸಿದೆ. ಇದೊಂದು ಎಲೆಕ್ಟ್ರಿಕ್ ಹೈಬ್ರಿಡ್ ಕಾರು. ಎಸ್‌ಯುವಿ ಮಾದರಿಯ ಈ ಕಾರು ಒಂದು ಲೀಟರ್‌ನಲ್ಲಿ 27.97 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮುಂಗಡ ಬುಕ್ಕಿಂಗ್ ಜುಲೈ 11 ರಿಂದ ಪ್ರಾರಂಭವಾಗಿದೆ. ಈ ಹೊಸ SUV ಗ್ರಾಂಡ್ ವಿಟಾರಾವನ್ನು 11,000 ರೂ.ಗೆ ಬುಕ್ ಮಾಡಬಹುದು.
ಸ್ವತಃ ಕಾರ್ ಬ್ಯಾಟರಿ ಚಾರ್ಜ್
ಹೊಸ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ಇದರಲ್ಲಿ ಮೋಟಾರ್ ಜೊತೆಗೆ ಪೆಟ್ರೋಲ್ ಎಂಜಿನ್ ಕೂಡ ಅಳವಡಿಸಲಾಗಿದೆ. ಕಾರಿನಲ್ಲಿರುವ ಬ್ಯಾಟರಿ ತಾನೇ ಚಾರ್ಜ್ ಆಗುತ್ತದೆ.

ಬೆಲೆ 9.5 ಲಕ್ಷ
ಮಾರುತಿಯ ಗ್ರ್ಯಾಂಡ್ ವಿಟಾರಾ ಸನ್‌ರೂಫ್ ಫೀಚರ್ಸ್ ನೊಂದಿಗೆ ಬರುತ್ತಿದೆ. ಈ ಹಿಂದೆ ಕಂಪನಿಯು ಹೊಸ ಬ್ರೆಝಾದಲ್ಲಿ ಸನ್‌ರೂಫ್ ನೀಡಿತ್ತು. ಗ್ರಾಂಡ್ ವಿಟಾರಾ ಬೆಲೆ ರೂ 9.5 ಲಕ್ಷ (ಎಕ್ಸ್ ಶೋ ರೂಂ) ಆಗಿರಬಹುದು. ಈ ಕಾರಿನಲ್ಲಿ ಕಂಪನಿಯು ವೆಂಟಿಲೇಟೆಡ್ ಸೀಟ್‌ಗಳು, ಮಲ್ಟಿಪಲ್ ಡ್ರೈವಿಂಗ್ ಮೋಡ್‌ಗಳಂತಹ ವೈಶಿಷ್ಟ್ಯಗಳನ್ನ ನೀಡಿದೆ. ಹವಾಮಾನ ಮತ್ತು ಭೂಪ್ರದೇಶದಲ್ಲಿ ಈ ಎಸ್‌ಯುವಿಯನ್ನು ಸುಲಭವಾಗಿ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಸುರಕ್ಷತೆಗಾಗಿ 6 ಏರ್‌ಬ್ಯಾಗ್
ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್ಬ್ಯಾಗ್ಗಳ ESP, ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸ್ಕ್ ಬ್ರೇಕ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು TPMS ಅನ್ನು ಹೊಂದಿದೆ. ಇದಲ್ಲದೆ, ಫೀಚರ್ ಗಳಲ್ಲಿ ಡಿಜಿಟಲ್ ಕ್ಲಸ್ಟರ್, ನೆಕ್ಸವೇವ್ ಗ್ರಿಲ್, 17-ಇಂಚಿನ ಅಲಾಯ್ ವೀಲ್ಸ್, ನೆಕ್ಸ್ಟ್ರೆ 3D ಎಲ್ಇಡಿ ಟೈಲ್ ಲ್ಯಾಂಪ್, ಪನೋರಮಿಕ್ ಸನ್ರೂಫ್, 360 ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಸೀಟ್, 7-ಇಂಚಿನ ಮಲ್ಟಿ ಇನ್ಫೋ ಡಿಸ್ಪ್ಲೇ, ಹೆಡ್ ಅಪ್ ಡಿಸ್ಪ್ಲೇ, ವೈರ್ಲೆಸ್ ಚಾರ್ಜರ್ ನಿರ್ಮಿಸಲಾಗಿದೆ.
Maruti Suzuki Grand Vitara 2022 India Unveil








