Vikrant Rona | ನಮ್ಮೂರಲ್ಲಿ 3D ನೋಡಬಹುದಾ…?
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಸದ್ಯದ ಟಾಕ್ ಆಫ್ ದಿ ಟೌನ್.
ಸದ್ಯ ರಿಲೀಸ್ ಆಗಿರುವ ಸಿನಿಮಾ ಟ್ರೇಲರ್ ಮತ್ತು ಹಾಡುಗಳು ನಿರೀಕ್ಷೆಗಳನ್ನು ಡಬಲ್ ಮಾಡಿವೆ.
ಹಲವು ಭಾಷೆಗಳಲ್ಲಿ ಬರುತ್ತಿರುವ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ.
ಜುಲೈ 28 ರಂದು ಈ ಸಿನಿಮಾ ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಲಿದೆ.
ಈ ಸಿನಿಮಾ ತ್ರಿಡಿಯಲ್ಲಿ ಬರಲಿದ್ದು, ಪ್ರೇಕ್ಷಕರಿಗೆ ಹೊಸ ಥ್ರಿಲ್ ನೀಡಲಿದೆ.
ಆದ್ರೆ ಎಲ್ಲರಲ್ಲೂ ಹುಟ್ಟಿಕೊಂಡಿರುವ ಪ್ರಶ್ನೆ ಏನಂದರೇ ಈ ಸಿನಿಮಾ ಕಂಪ್ಲೀಟ್ ಆಗಿ ತ್ರಿಡಿಯಲ್ಲಿಯೇ ಬರಲಿದ್ಯಾ..? ಇಲ್ಲಾ ಟು ಡಿ ಯಲ್ಲೂ ಬರುತ್ತಾ ಅಂತಾ.
ಇದಕ್ಕೆ ಉತ್ತರ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಕಂಪ್ಲೀಟ್ ಆಗಿ ತ್ರಿಡಿ ಅಲ್ಲಿ ಮಾತ್ರವಲ್ಲದೇ ಟು ಡಿ ಯಲ್ಲೂ ಕೂಡ ಬರಲಿದೆ.
ಅಂದ್ರೆ ಈ ಸಿನಿಮಾವನ್ನು ಸಾಮಾನ್ಯ ಥಿಯೇಟರ್ ಗಳಲ್ಲೂ ನೋಡಬಹುದು.
ನಮ್ಮ ಊರಿನಲ್ಲಿರುವ ಥಿಯೇಟರ್ ಗಳಲ್ಲಿ ಸಿನಿಮಾ ಟು ಡಿ ಅಲ್ಲಿ ರಿಲೀಸ್ ಆಗಲಿದೆ.
ಆದ್ರೆ ಜಿಲ್ಲೆಯ ಕೆಲವೊಂದು ಥಿಯೇಟರ್ ಗಳಲ್ಲಿ ತ್ರಿಡಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಅಂದರೆ ಪ್ರತಿ ಜಿಲ್ಲೆಯ ಐದಕ್ಕಿಂತ ಹೆಚ್ಚು ಥಿಯೇಟರ್ ಗಳಲ್ಲಿ ಈ ಸಿನಿಮಾ ತ್ರಿಡಿಯಲ್ಲಿ ರಿಲೀಸ್ ಆಗಲಿದೆ.
ಇನ್ನುಳಿದ ಥಿಯೇಟರ್ ಗಳಲ್ಲಿ ಈ ಸಿನಿಮಾ ಟು ಡಿ ಯಲ್ಲಿ ರಿಲೀಸ್ ಆಗಲಿದೆ.
ತ್ರಿಡಿ ಬಯಸುವವರು ಆಯಾ ಆಯ್ದ ಥಿಯೇಟರ್ ಗಳಿಗೆ ಹೋಗಿ ಸಿನಿಮಾ ನೋಡಬಹುದಾಗಿದೆ.
ಬಿ ಮತ್ತು ಸಿ ಸೆಂಟರ್ ಗಳಲ್ಲಿ ಬಹುತೇಕ ಟು ಡಿ ಯಲ್ಲಿ ರಿಲೀಸ್ ಆಗಲಿದೆ.
ಒಟ್ಟಾರೆ ವಿಕ್ರಾಂತ್ ರೋಣ ಸಿನಿಮಾಗಾಗಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ಕೂಡ ಸಿನಿಮಾ ಪ್ರಿಯರು ಕಾದು ಕುಳಿತಿದ್ದಾರೆ.
ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಲಂ, ಇಂಗ್ಲೆಂಡ್ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.