Ramesh kumar | ಗಾಂಧಿ ಕುಟುಂಬದ ಋಣ ತೀರಿಸದೇ ಹೋದರೆ ತಿನ್ನುವ ಅನ್ನಕ್ಕೆ ಹುಳ
ಬೆಂಗಳೂರು : ಗಾಂಧಿ ಕುಟುಂಬದ ಋಣ ತೀರಿಸದೇ ಹೋದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಈ ಪ್ರತಿಭಟನೆಯಲ್ಲಿ ಮಾತನಾಡಿದ ರಮೇಶ್ ಕುಮಾರ್, ಕಾಂಗ್ರೆಸ್ ಸುಮಾರು 70 ವರ್ಷ ದೇಶ ಆಳಿದೆ.
ಕಾಂಗ್ರೆಸ್‌ನವರೇ ಆದ ನಾವೆಲ್ಲರೂ ಗಾಂಧಿ ಕುಟುಂಬ ಹೆಸರಲ್ಲಿ ಮುಂದಿನ ಮೂರು – ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡಿದ್ದೇವೆ. ಅಧಿಕಾರ ಅನುಭವಿಸಿದ್ದೇವೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಈಗ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರತ್ರಿಕೆ ಖರೀದಿ ಅವ್ಯವಹಾರ ಮತ್ತು ಹಣ ವರ್ಗಾವಣೆ ಆರೋಪ ಮೇಲೆ ವಿಚಾರಣೆ ನಡೆಯುತ್ತಿದೆ.
ಗಾಂಧಿ ಕುಟುಂಬದ ಋಣ ತೀರಿಸದೇ ಹೋದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ. ಪಕ್ಷ ಕುಟುಂಬ ಇದ್ದಂತೆ.
ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ಮನಸ್ತಾಪ ಸಹಜ. ಅವೆಲ್ಲವುಗಳನ್ನು ಬದಿಗೊತ್ತಿ ನಾವೆಲ್ಲರು ಒಂದಾಗಬೇಕು.
ಸಂಕಷ್ಟದಲ್ಲಿರುವ ಸೋನಿಯಾ ಅವರೊಂದಿಗೆ ನಿಂತು ನೈತಿಕ ಬೆಂಬಲ ನೀಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮನವಿ ಮಾಡಿದ್ದಾರೆ.








