ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶ್ರಾವಣ ಮಾಸದ ಮಹತ್ವ, ಹಿನ್ನೆಲೆ, ವ್ರತದ ಆಚರಣೆ, ಪ್ರಮುಖ ದಿನ ಮತ್ತು ಹಬ್ಬಗಳು ಶ್ರಾವಣ ಮಾಸದ ಸಂಪೂರ್ಣ ಮಾಹಿತಿ..

Mahesh M Dhandu by Mahesh M Dhandu
July 22, 2022
in Astrology, Newsbeat, ಜ್ಯೋತಿಷ್ಯ
shravana-somavara-2022 mahatva in kannada saaksha tv

shravana-somavara-2022 mahatva in kannada saaksha tv

Share on FacebookShare on TwitterShare on WhatsappShare on Telegram

ಶ್ರಾವಣ ಮಾಸದ ಮಹತ್ವ, ಹಿನ್ನೆಲೆ, ವ್ರತದ ಆಚರಣೆ, ಪ್ರಮುಖ ದಿನ ಮತ್ತು ಹಬ್ಬಗಳು ಶ್ರಾವಣ ಮಾಸದ ಸಂಪೂರ್ಣ ಮಾಹಿತಿ..

ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರಮಂಥನಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಶ್ರೀ ಲಕ್ಷ್ಮಿಯೂ ಸೇರಿದಂತೆ ಚತುರ್ದಶ ರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

ಸನಾತನ ಧರ್ಮದಲ್ಲಿನ ವ್ರತ ಹಾಗೂ ಉತ್ಸವಗಳು ಋತು, ಪ್ರಕೃತಿ, ಕುಲ, ವೃತ್ತಿ ಹಾಗೂ ಪ್ರಾದೇಶಿಕ ಪ್ರಭಾವಗಳನ್ನು ಮೈದಾಳಿ ಬರುವಂತಹವು. ವರ್ಷಾಋತುವಿನಲ್ಲಿ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ ದೂರವಿರಿಸುವ ಸಲುವಾಗಿ ಶ್ರಾವಣದ ಹಬ್ಬಗಳಲ್ಲಿ ಉಪವಾಸ, ಪೂಜೆ, ಜಪ, ದಾನ, ಧ್ಯಾನ ಮುಂತಾದ ವ್ರತಾಂಶಗಳೇ ಹೆಚ್ಚು.

ಶ್ರಾವಣ ಮಾಸದಹಬ್ಬಆಚರಣೆಗಳು;
. ಶ್ರಾವಣಮಾಸದಲ್ಲಿ ಹಬ್ಬಗಳು ಒಂದಾದ ಮೇಲೊಂದು ಸಾಲು-ಸಾಲಾಗಿ ಬರುತ್ತವೆ. ಶ್ರಾವಣ ಮಾಸವನ್ನು “ಹಬ್ಬಗಳ ಮಾಸ “ಎಂದು ಕರೆಯುವುದುಂಟು. ಶ್ರಾವಣ ಮಾಸ ಬಂತೆಂದರೆ ಎಲ್ಲರ ಮನೆಗಳಲ್ಲಿ ಸಡಗರವೋ ಸಡಗರ. ಎಲ್ಲ ದೇವ – ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ನಮ್ಮ ಸಂಪ್ರದಾಯ, ಸಂಸ್ಕೃತಿ ಪ್ರತಿಬಿಂಬಿತವಾಗುತ್ತದೆ.

ಶ್ರಾವಣಮಾಸದಲ್ಲಿ ಮಂಗಳಗೌರಿ ವ್ರತ, ನಾಗರ ಪಂಚಮಿ, ನಾಗರ ಷಷ್ಠಿ, ಶ್ರಾವಣ ಶುಕ್ರವಾರಗಳು, ಶ್ರಾವಣ ಶನಿವಾರಗಳು, ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ, ಸ್ವಾತಂತ್ರ್ಯ ದಿನಾಚರಣೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ಫಲಗೌರಿ ವ್ರತ ಹೀಗೆ … ಹಬ್ಬಗಳ ಸಾಲು ಸಾಲು ಇವೆ.

ಮಂಗಳಗೌರಿ ವ್ರತ : ಶ್ರಾವಣ ಮಾಸದಲ್ಲಿ ಬರುವ ಮಂಗಳವಾರಗಳು ಆಚರಿಸುವ ವ್ರತವೇ ಈ ಮಂಗಳಗೌರಿ ವ್ರತ. ಶ್ರಾವಣ ಮಂಗಳ ಗೌರಿ ವ್ರತವು ತುಂಬಾ ಶುಭಪ್ರದವಾದುದು, ಮಂಗಳಕರವಾದುದು. ಈ ವ್ರತವನ್ನು ಸಕಲ ಭೋಗ ಭಾಗ್ಯ, ಸಕಲ ಸಂಪತ್ತನ್ನು, ಸುಮಂಗಲಿತನವನ್ನು ಪಡೆಯಲು ಆಚರಿಸುತ್ತಾರೆ. ವ್ರತಾಚರಣೆಯಿಂದ ಪತಿಗೆ ಆಯುಸ್ಸು ವೃದ್ಧಿಯಾಗಿ ಕೀರ್ತಿಯು ಲಭಿಸುತ್ತದೆ. ವ್ರತ ಶುರುಮಾಡಿದ ನಂತರ ತಪ್ಪದೆ ಐದು ವರ್ಷಗಳು ಆಚರಿಸಬೇಕು. ಮುತ್ತೈದೆಯರು ಮಾತ್ರವೇ ಅಲ್ಲದೆ ಕನ್ನಿಕೆಯರು ಕೂಡ ನಾಲ್ಕು ವರ್ಷಗಳ ಕಾಲ ಆಚರಿಸಿ ಒಂದು ವರ್ಷ ಮದುವೆಯಾದ ಮೇಲೆ ವ್ರತ ಆಚರಿಸಬಹುದಾಗಿದೆ. ಈ ವ್ರತವನ್ನು ಆಚರಿಸಿ ನಂತರ ಐದು ಜನ ಮುತ್ತೈದೆಯರಿಗೆ ಬಾಗಿನ ಕೊಡಬೇಕು.

ನಾಗ ಪಂಚಮಿ – : ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷ ಪಂಚಮಿ ದಿನದಂದು ಆಚರಿಸುವರು. ಈ ದಿನ ಮೂಲ ನಾಗಬನದಲ್ಲಿ ಮನೆಯ ಸಮೀಪದ ನಾಗಬನಗಳಲ್ಲಿ ನಂಬಿಕೊಂಡು ಬಂದ ನಾಗಬನಗಳಲ್ಲಿ ನಾಗ ದೇವರಿಗೆ ಹಾಲೆರೆದು ಪೂಜೆ ಮಾಡಿ, ನಾಗಾನುಗ್ರಹವನ್ನು ಪಡೆಯುತ್ತಾರೆ

ಶ್ರಾವಣ ಶುಕ್ರವಾರ : ಶ್ರಾವಣ ಮಾಸದಲ್ಲಿ ಬರುವ ಪ್ರತೀ ಶುಕ್ರವಾರದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿ ಲಕ್ಷ್ಮಿಗೆ ಇಷ್ಟವಾದ ಕಡಲೇಕಾಳು ನೈವೇದ್ಯ ಮಾಡಿ ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ಲಕ್ಷ್ಮೀದೇವಿಗೆ ಆರತಿ ಮಾಡುವರು. ವರಮಹಾಲಕ್ಷ್ಮಿ ವ್ರತವನ್ನ ಹುಣ್ಣಿಮೆಯ ಹತ್ತಿರದ ಶುಕ್ರವಾರದಲ್ಲಿ ಆಚರಿಸುವರು.

ಶ್ರಾವಣ ಶನಿವಾರ : ಶ್ರಾವಣ ಶನಿವಾರಗಳಲ್ಲಿ ವಿಶೇಷವಾಗಿ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸುವರು. ಮನೆಯ ಹಿರಿಯರು ಕುಲದೇವರಿಗೆ ತಿರುಪತಿಯ ವೆಂಕಟರಮಣನಿಗೆ ಕಾಣಿಕೆ ತೆಗೆದಿಟ್ಟು; ಕಾಶಿ ಅಥವಾ ಕಾವೇರಿ ಇನ್ನಿತರ ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದ ನೆನಪಿಗಾಗಿ ಕಾಶಿ ಸಮಾರಾಧನೆ ಕಾವೇರಿ ಸಮಾರಾಧನೆ ಮೊದಲಾಗಿ ಬ್ರಾಹ್ಮಣ ಸಂತರ್ಪಣೆ ಮಾಡುವುದು ಈ ದಿನದ ವಿಶೇಷ.

ರಕ್ಷಾ ಬಂಧನ : ಇದನ್ನು ರಾಕಿ ಎಂದು ಕರೆಯುವರು. ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸುವರು ಇದು ಅಣ್ಣ-ತಂಗಿಯರ ಹಬ್ಬ. ರಕ್ಷಾ ಎಂದರೆ ರಕ್ಷಣೆ. ತಂಗಿಯು ಅಣ್ಣನಿಗೆ ರಕ್ಷೆ (ರಾಖಿ) ಕಟ್ಟಿದರೆ ಅಣ್ಣ – ತಂಗಿಯ ರಕ್ಷಣೆ ಮಾಡುವನು ಎಂಬ ಪ್ರತೀತಿ. ಅಣ್ಣನು ಏನಾದರೂ ಕಾಣಿಕೆಯನ್ನು ತಂಗಿಗೆ ನೀಡುವನು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

shravana-somavara-2022 mahatva in kannada saaksha tv
shravana-somavara-2022 mahatva in kannada saaksha tv

ವರಮಹಾಲಕ್ಷ್ಮಿ ವ್ರತ : ಇದನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಆಚರಿಸುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲಾಗುವುದು. ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ವರಮಹಾಲಕ್ಷ್ಮಿಯ ವ್ರತವಿದು. ಈ ವ್ರತವನ್ನು ಈ ದಿನ ಮಾಡಲಾಗದಿದ್ದರೂ ಶ್ರಾವಣ ಮಾಸದ ಮೂರನೆಯ ಅಥವಾ ನಾಲ್ಕನೆಯ ಶುಕ್ರವಾರಗಳು ಆಚರಿಸಬಹುದು.

ಪೂರ್ವಕಾಲದಲ್ಲಿ ವಿದರ್ಭ ದೇಶದ ರಾಜಧಾನಿ ಕುಂಡಿನ ನಗರದಲ್ಲಿ ಪತಿವ್ರತೆಯೂ, ಸದಾಚಾರ ಸಂಪನ್ನಳು, ದರಿದ್ರಳು ಆದ ಚಾರುಮತಿ ಎಂಬ ಸ್ತ್ರೀ ಇದ್ದಳು. ಚಾರುಮತಿ ನಿದ್ರೆಯಲ್ಲಿದ್ದಾಗ ಶ್ರೀ ಮಹಾಲಕ್ಷ್ಮಿಯು ಬಂದು “ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವಕಾಲದ ಪುಣ್ಯ ಅನುಸಾರವಾಗಿ ನಿನಗೆ ಅನುಗ್ರಹ ನೀಡಲು ಬಂದಿರುವೆ ಎಂದಳು” ಶ್ರಾವಣ ಮಾಸದ ಎರಡನೇ ಶುಕ್ರವಾರ ದಿನ ಪ್ರದೋಷ ಸಮಯಕ್ಕೆ ನನ್ನನ್ನು ಪೂಜೆ ಮಾಡು ನಿನ್ನ ದಾರಿದ್ರ್ಯವನ್ನು ನೀಗಿಸಿ ಅಷ್ಟೈಶ್ವರ್ಯವನ್ನು ಕೊಡುತ್ತೇನೆಂದು ಹೇಳಿ ಕಣ್ಮರೆಯಾದಳು. ಮರುದಿನ ಚಾರುಮತಿಯು ಮನೆಯವರೊಂದಿಗೆ ಈ ವಿಷಯವನ್ನು ಹೇಳಿ ಶ್ರಾವಣ ಮಾಸದ ಎರಡನೇ ಶುಕ್ರವಾರಕ್ಕಾಗಿ ಕಾದು, ದಿನ ಮಹಾಲಕ್ಷ್ಮಿಯ ಪೂಜೆ ಮಾಡಿದಳು. ದರಿದ್ರಳಾಗಿದ್ದ ಚಾರುಮತಿಯು ಅಷ್ಟೈಶ್ವರ್ಯ ಪಡೆದು ಪುತ್ರಪೌತ್ರಾದಿಗಳಿಂದ ಕೂಡಿ ಸುಖದಿಂದ ಇದ್ದಳು. ಅಂದಿನಿಂದ ವರಮಹಾಲಕ್ಷ್ಮಿ ವ್ರತವು ಆಚರಣೆಗೆ ಬಂದಿತು.

 ಉಪಾಕರ್ಮ ಎಂದರೆ ಉಪಾನೀತರಾದವರು ವೇದಾಧ್ಯಯನವನ್ನು ಪ್ರಾರಂಭಿಸಲು ಮಾಡುವ ಒಂದು ವಿಶೇಷ ಸಂಸ್ಕಾರ. ಇದನ್ನು ಋಗ್ವೇದವನ್ನು ಆಚರಿಸುವವರು ಶ್ರಾವಣ ಮಾಸದ ಶ್ರವಣ ನಕ್ಷತ್ರದಂದು ಆಚರಿಸಲಾಗುವುದು.

ಈ ದಿನ ಪೂಜೆ ಮಾಡಿ ಜನಿವಾರವನ್ನು ಧರಿಸಲಾಗುವುದು, ಈ ಜನಿವಾರ ಪ್ರಣವ-ಓಂಕಾರ ಸೂಚಿಸುತ್ತದೆ. ಇದರಲ್ಲಿರುವ 3 ಸೂಕ್ಷ್ಮ ವಾದ ಎಳೆಗಳು ಮೂರು ವೇದಗಳ ಕುರಿತು ಸೂಚಿಸುತ್ತದೆ. ಬ್ರಹ್ಮಚಾರಿಗಳು 3 ಎಳೆಗಳ ಜನಿವಾರ ಧರಿಸದರೆ, ಗೃಹಸ್ಥರು 6 ಎಳೆಗಳ ಜನಿವಾರ ಧರಿಸುತ್ತಾರೆ. ಗೃಹಸ್ಥರು ಧರಿಸುವ ಹೆಚ್ಚಿನ 3 ಎಳೆಗಳು ಭಕ್ತಿ, ಜ್ಞಾನ, ಕರ್ಮಗಳ ಪಾವಿತ್ರ್ಯತೆಯ ಸಂಕೇತವಾಗಿದೆ. ಸಾಧಕರು 9 ಎಳೆಗಳ ಜನಿವಾರ ಧರಿಸುತ್ತಾರೆ, ಅವು ಅವರ ಸಾಧನೆಯ ಸೋಪಾನವಾದ ಸತ್, ಚಿತ್, ಆನಂದ ಎಂಬ ಮೂರು ಸ್ಥತಿಯನ್ನು ಸೂಚಿಸುತ್ತದೆ.

ಈ ದಿನ ಗಾಯತ್ರಿ ಮಂತ್ರಕ್ಕೆ ಹೊಸ ಸಿದ್ಧಿಯನ್ನು ಪಡೆದುಕೊಳ್ಳುವ ಸಂಕಲ್ಪ ಮಾಡಬೇಕು. ಈ ಜಪವನ್ನು ಆವರ್ತನೆಯಂತೆ ವಿದ್ಯೆ, ಸಿದ್ಧಿ, ಸಂತಾನ, ಕೀರ್ತಿ, ಲಾಭ, ಬ್ರಹ್ಮತೇಜಸ್ಸು, ವೈರಾಗ್ಯಗಳನ್ನು ಗಳಿಸಲು ವಿನಿಯೋಗಿಸಬೇಕು ಎಂದ ಹೇಳಲಾಗಿದೆ. ಈ ಮಂತ್ರವನ್ನು ಆತ್ಮಕಲ್ಯಾಣಕ್ಕೂ, ಲೋಕಕಲ್ಯಾಣಕ್ಕೂ ಬಳಸಬಹುದು.

ಈ ದಿನದಂದು ಲೋಕಮಾತೆಯಾಗಿ ಗಾಯತ್ರಿಯನ್ನು ಆರಾಧಿಸಿ, ಜ್ಞಾನವನ್ನು ನೀಡುವಂತೆ ಪ್ರಾರ್ಥಿಸಲಾಗುವುದು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಉಪಾಕರ್ಮ ಆಚರಣೆ
ಉಪಾಕರ್ಮ ಆಚರಣೆ ಶಾಸ್ತ್ರೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕ ವಿಧಿ. ಸಂವತ್ಸರ ಕೃತ ದೋಷ ಪರಿಹಾರಾರ್ಥ ಅಂದರೆ ವರ್ಷವಿಡೀ ತಿಳಿದೋ, ತಿಳಿಯದೆಯೋ ಆದ ತಪ್ಪಿಗೆ ದೇವರ ಕ್ಷಮೆ ಕೋರಿ, ಅದರಿಂದ ಕಟ್ಟಿಕೊಂಡ ಪಾಪ ನಿವಾರಣೆಗಾಗಿ ವರ್ಷಕ್ಕೊಮ್ಮೆ ಈ ಆಚರಣೆ ಮಾಡಲಾಗುತ್ತದೆ.
ಉಪಾಕರ್ಮದ ದಿನ ಅಭ್ಯಂಜನ ಮಾಡಿ, ಪುಣ್ಯಾಹ, ನಾಂದಿ ನಂತರ ಉತ್ಸರ್ಜನ ಹೋಮ ಮಾಡಿ, ಗುರು(ಋಷಿ) ಕಾಣಿಕೆ ನೀಡಿ ಜನಿವಾರ ಅರ್ಥಾತ್‌ ಯಜ್ಞೋಪವೀತ ಧಾರಣೆಯನ್ನು ಮಾಡಿಕೊಳ್ಳುವುದು ಸಂಪ್ರದಾಯ.
ಉತ್ಸರ್ಜನ ಎಂದರೆ, ದೇಶ ಶುದ್ಧಿ. ಅಂದರೆ ದೇಹ ಶುದ್ಧಿಗಾಗಿ ಮಾಡುವ ಹೋಮ ಉತ್ಸರ್ಜನ. ಈ ಹೋಮ ಅಥವಾ ಯಾಗ ಮಾಡುವುದರಿಂದ ವರ್ಷವಿಡೀ ಮಾಡಿದ ಗಾಯಿತ್ರಿ ಮಂತ್ರ ಜಪ, ಪೂಜೆ, ಸಂಧ್ಯಾವಂದನೆಗೆ ಬಲ ಬರುತ್ತದೆ.

ಕೃಷ್ಣ ಜನ್ಮಾಷ್ಟಮಿ : ದೇವಕಿ ಮತ್ತು ವಸುದೇವನ ಪುತ್ರನಾದ ಶ್ರೀ ಕೃಷ್ಣನು ಹುಟ್ಟಿದ ದಿವಸವನ್ನು ಶ್ರೀ ಕೃಷ್ಣಾಷ್ಟಮಿ ಎಂದು ಆಚರಿಸುತ್ತಾರೆ. ಇದು ವಿಷ್ಣುವಿನ ಎಂಟನೇ ಅವತಾರ. ಈ ಈ ಹಬ್ಬವನ್ನು ಗೋಕುಲಾಷ್ಟಮಿ, ಶ್ರೀಕೃಷ್ಣ ಜಯಂತಿ ಎಂದು ಕರೆಯುವರು. ವೈಷ್ಣವರಿಗೆ ಇದು ತುಂಬಾ ಮುಖ್ಯವಾದ ಹಬ್ಬ. ಮಥುರಾ ವೃಂದಾವನದಲ್ಲಿ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವರು. ಈ ದಿನ ಶ್ರೀ ಕೃಷ್ಣನ ಪೂಜೆ ಮಾಡಿ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಉಂಡೆ ಅವಲಕ್ಕಿಯನ್ನು ನೈವೇದ್ಯ ಮಾಡಿ ಉಪವಾಸವಿದ್ದು ತುಳಸಿಯಿಂದ ಅಷ್ಟೋತ್ತರ ಸಹಸ್ರನಾಮ ಗಳಿಂದ ಕೃಷ್ಣನನ್ನ ಪೂಜಿಸುವುದು ಈ ದಿನದ ವಿಶೇಷ.

ಸ್ವಾತಂತ್ರ್ಯ ದಿನೋತ್ಸವ : ಇದು ನಮ್ಮ ರಾಷ್ಟ್ರೀಯ ಹಬ್ಬ. ಇದು ಕೂಡ ಶ್ರಾವಣ ಮಾಸದಲ್ಲಿ ಬರುವುದು.
ಇನ್ನೂ ಹಲವಾರು ಹಬ್ಬಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ
ಮುಂದುವರೆಯುವುದು

ಲೋಕಾ ಸಮಸ್ತಾಃ ಸುಖಿನೋ ಭವಂತು

Tags: #Saaksha TVshivashravana-somavara
ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram