President election 2022 – 10 ರಾಜ್ಯಗಳ 110 ಶಾಸಕರಿಂದ ಅಡ್ಡ ಮತದಾನ
ತೀವ್ರ ಕುತೂಹಲ ಕೆರಳಿಸಿದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ.
ದೇಶದ ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆವರ ಆಯ್ಕೆ ಖಚಿತವಾಗಿತ್ತು. ಆದರೆ ಗೆಲುವಿನ ಅಂತರ ವಿಪಕ್ಷಗಳನ್ನ ಚಿಂತೆಗೀಡುಮಾಡಿದೆ. ಮತದಾನದ ವೇಳೆ ನಡೆದ ಅಡ್ಡ ಮತದಾನ ಮುರ್ಮು ಅವರ ಗೆಲುವಿನ ಅಂತರವನ್ನ ಮತ್ತಷ್ಟು ಹೆಚ್ಚಿಸಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ವಿಪಕ್ಷಗಳು ಆಡಳಿತದಲ್ಲಿಯೇ ಅತಿ ಹೆಚ್ಚು ಕ್ರಾಸ್ ಓಟಿಂಗ್ ಗಳು ನಡೆದಿದೆ. ಅಸ್ಸಾಂನಲ್ಲಿ ಗರಿಷ್ಠ ಅಡ್ಡ ಮತದಾನ ನಡೆದಿದೆ. 126 ಸದಸ್ಯ ಬಲದ ಈ ವಿಧಾನಸಭೆಯಲ್ಲಿ ಎನ್ಡಿಎ ಶಾಸಕರ ಬಲ 79 ಆಗಿದ್ದರೆ, ಮುರ್ಮು ಬೆಂಬಲಕ್ಕೆ 104 ಮತಗಳು ಚಲಾವಣೆಯಾಗಿವೆ. ಇದಲ್ಲದೇ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಅಡ್ಡ ಮತದಾನ ನಡೆದಿದೆ.
ರಾಜ್ಯ ಅಡ್ಡ ಮತದಾನ
ಅಸ್ಸಾಂ 22
ಮಧ್ಯಪ್ರದೇಶ 19
ಮಹಾರಾಷ್ಟ್ರ 16
ಉತ್ತರ ಪ್ರದೇಶ 12
ಗುಜರಾತ್ 10
ಜಾರ್ಖಂಡ್ 10
ಬಿಹಾರ 6
ಛತ್ತೀಸ್ಗಢ 6
ರಾಜಸ್ಥಾನ 5
ಗೋವಾ 4
17 ಸಂಸದರಿಂದಲೂ ಅಡ್ಡ ಮತದಾನ
ಶಾಸಕರ ಜೊತೆ ಸಂಸದರು ಕೂಡ ಮುರ್ಮು ಅವರನ್ನು ಬೆಂಬಲಿಸಿ ಅಡ್ಡ ಮತದಾನ ಮಾಡಿದ್ದಾರೆ. ವಿರೋಧ ಪಕ್ಷದ 17 ಸಂಸದರು ಯಶವಂತ್ ಸಿನ್ಹಾ ಬದಲಿಗೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಮತ ಚಲಾಯಿಸಿದರು. ಎನ್ಡಿಎ ಅಭ್ಯರ್ಥಿಯನ್ನ ಶಿವಸೇನೆ, ಬಿಜೆಡಿ, ವೈಎಸ್ಆರ್ ಕಾಂಗ್ರೆಸ್, ಬಿಎಸ್ಪಿ, ಅಕಾಲಿದಳ, ಜೆಡಿಎಸ್ ಸೇರಿದಂತೆ ಕೆಲವು ಸ್ವತಂತ್ರ ಸಂಸದರು ದ್ರೌಪದಿ ಮುರ್ಮು ಅವರನ್ನ ಬೆಂಬಲಿಸಿದ್ದಾರೆ ಎಂಬುದು ಗಮನಾರ್ಹ.








