Minister R. Ashok | ಕರ್ನಾಟಕದಲ್ಲಿ ಕಾಂಗ್ರೆಸ್ ನವರು 40% ದುಡ್ಡು ತಿಂದಿದ್ದಾರೆ
ಮಂಡ್ಯ : ಕರ್ನಾಟಕದಲ್ಲಿ ಕಾಂಗ್ರೆಸ್ ನವರು 40% ದುಡ್ಡು ತಿಂದಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ Minister R. Ashok ಕಿಡಿಕಾರಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಜುಲೈ 12ರಂದು ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದು, ಸೋನಿಯಾಗಾಂಧಿಯವರನ್ನು ವಿಚಾರಣೆಗೆ ಕರೆದಿರುವ ಇಡಿ ನಿರ್ಧಾರ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ Minister R. Ashok, ಕಾಂಗ್ರೆಸ್ ನವರನ್ನ ಅರೆಸ್ಟ್ ಮಾಡಿದ್ರೆ ED ಸರಿ ಇಲ್ಲ. ಜನಾರ್ದನ ರೆಡ್ಡಿ ಅವರನ್ನ ಅರೆಸ್ಟ್ ಮಾಡಿದಾಗ ED ಸರಿಯಿತ್ತಾ ಎಂದು ಪ್ರಶ್ನಿಸಿದರು.
ಮಾಡಿದ್ದು ಉಣ್ಣೋ ಮಾರಾಯಾ, ನೀವು ಏನು ಮಾಡಿದ್ದಿರೋ ಅದೇ ನಡೆಯುತ್ತಿದೆ ಅಷ್ಟೆ. ತನಿಖಾ ಸಂಸ್ಥೆಗಳನ್ನ ಸರ್ಕಾರ ದುರುಪಯೋಗ ಮಾಡಿಕೊಳ್ಳಲ್ಲ. ಕಾಂಗ್ರೆಸ್ ನವರು ಸಿಕ್ಕಾಕೊಂಡಾಗ ಮೇಲೆ ಇತರಹದ ಆರೋಪ ಮಾಡುತ್ತಾರೆ.

ರಾಹುಲ್ ಗಾಂಧಿ ಮೂರು ದಿನ ಎಲ್ಲೋ ಹೋಗಿ ಕುಳಿತುಕೊಳ್ಳಬೇಕಿತ್ತು. ದಾಖಲೆಗಳನ್ನ ಕೊಟ್ಟಿದ್ರೆ ಒಂದೇ ದಿನಕ್ಕೆ ಆಚೆ ಬರಬಹುದಿತ್ತು. ದಾಖಲೆ ಕೊಡಕಾಗದೆ ಪರಿತಪಿಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ, ನಾಲ್ಕು ತಲೆಮಾರಿಗಾಗುವಷ್ಟು ತಿದ್ದುಬಿಟ್ಟಿದ್ದಿನಿ ಅಂತ. ಕಾಂಗ್ರೆಸ್ ಋಣವನ್ನ ತೀರಿಸಬೇಕು ಅಂದಿದ್ದಾರೆ.
ಇದರಿಂದ ಕರ್ನಾಟಕದಲ್ಲಿ ಯಾರು 40% ದುಡ್ಡು ತಿಂದಿದ್ದಾರೆ ಅಂತ ಅರ್ಥವಾಗಿದೆ.
ಕಾಂಗ್ರೆಸ್ ನವರ ಸ್ಥಿತಿ ಏನು ಅಂತ ಇವತ್ತು ಬೀದಿಗೆ ಬಂದಿದೆ. ರಮೇಶ್ ಕುಮಾರ್ ಹೇಳಿದ ಮೇಲೆ ಸೋನಿಯ ಗಾಂಧಿ, ರಾಹುಲ್ ಗಾಂಧಿ ಎಲ್ಲರು ಇದರಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ.








