ಡೆಲ್ ನ ಹೊಸ ಲ್ಯಾಪ್ ಟಾಪ್ Dell XPS 13 Plus 9320 ಭಾರತದಲ್ಲಿ ಬಿಡುಗಡೆ…
Dell ಕಂಪನಿ ತನ್ನ ಹೊಸ ಲ್ಯಾಪ್ಟಾಪ್ Dell XPS 13 Plus 9320 ಎಂಬ ಮಾಡೆಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. Dell XPS 13 Plus 9320 ಲ್ಯಾಪ್ ಟಪ್ ನಲ್ಲಿ Infinity Edge ಡಿಸ್ಪ್ಲೆ ನೀಡಲಾಗಿದೆ. Dell ನ ಲ್ಯಾಪ್ಟಾಪ್ ಇಂಟೆಲ್ 12ನೇ Gen 28W ಪ್ರೊಸೆಸರ್ ನೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಇದರೊಂದಿಗೆ ಎಕ್ಸ್ಪ್ರೆಸ್ ಚಾರ್ಜ್, ಐ ಸೇಫ್ ತಂತ್ರಜ್ಞಾನ ಮತ್ತು ಮೊದಲಿಗಿಂತ ಉತ್ತಮ ಸ್ಪೀಕರ್ ಗಳನ್ನ ಒಳಗೊಂಡಿದೆ.
Dell XPS 13 ಪ್ಲಸ್ 9320 ಮಾಡೆಲ್ ನ ಬೆಲೆ
ADL-P Ci5-1240P 12 ಕೋರ್ಗೆ 16 GB RAM ಮತ್ತು 512 GB ಮಾದರಿಯ Dell XPS 13 Plus 9320 ಲ್ಯಾಪ್ ಟಾಪ್ ನ ಬೆಲೆ ಬೆಲೆ 1,59,990 ರೂ. ಆಗಲಿದೆ. ADL-P Ci7-1260P 12 ಕೋರ್, 16 GB RAM ಜೊತೆಗೆ 1 TB ಸ್ಟೋರೇಜ್ನ ಬೆಲೆ 1,79,990 ರುಪಾಯಿಗಳು. ಈ Dell ಲ್ಯಾಪ್ಟಾಪ್ನ ಮಾರಾಟವು ಜುಲೈ 23 ರಿಂದ ಅಂದರೆ ನಾಳೆಯಿಂದ Amazon ಮತ್ತು ಕಂಪನಿಯ ವೆಬ್ ಸೈಟ್ನಲ್ಲಿ ಪ್ರಾರಂಭವಾಗುತ್ತಿದೆ.

Dell XPS 13 ಪ್ಲಸ್ 9320 ನ ವಿಶೇಷತೆಗಳು (ಫೀಚರ್ಸ್)
Dell XPS 13 Plus 9320 ಲ್ಯಾಪ್ ಟಾಪ್ ನಲ್ಲಿ 4K ರೆಸಲ್ಯೂಶನ್ನೊಂದಿಗೆ 13-ಇಂಚಿನ ನಾಲ್ಕು- ಬದಿಯ ಇನ್ಫಿನಿಟಿ ಎಡ್ಜ್ ಅಲ್ಟ್ರಾ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಲ್ಯಾಪ್ಟಾಪ್ನಲ್ಲಿ 12th ಜನರೇಷನ್ ಇಂಟೆಲ್ ಕೋರ್ 28W ಪ್ರೊಸೆಸರ್ ಲಭ್ಯವಿದೆ. ಲ್ಯಾಪ್ಟಾಪ್ ಕೆಪ್ಯಾಸಿಟಿವ್ ಟಚ್ಪ್ಯಾಡ್ ಗ್ಲಾಸ್ನೊಂದಿಗೆ ಜೀರೋ ಲ್ಯಾಕ್ಟಿಕ್ ಕೀಬೋರ್ಡ್ ನ್ನ ಒಳಗೊಂಡಿದೆ. ಈ ಲ್ಯಾಪ್ಟಾಪ್ ನಲ್ಲಿ ನಾಲ್ಕು ಸ್ಪೀಕರ್ಗಳು ಕಾರ್ಯ ನಿರ್ವಹಿಸಲಿವೆ. ಒಂದು ಗಂಟೆಯೊಳಗೆ 80% ವರೆಗೆ ಬ್ಯಾಟರಿ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.








