Congress vs BJP | ನಕಲಿ ಗಾಂಧಿಗಳಿಗಾಗಿ ಮೌನವಾಗಿರುವುದು ನಾಚಿಗೆಗೇಡಿನ ಸಂಗತಿ
ಬೆಂಗಳೂರು : ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಹೊತ್ತಿನಲ್ಲೂ, ದೇಶದ ಶ್ರೇಷ್ಠತೆಯ ಬಗ್ಗೆ ಸಾರುವ ಬದಲು ನಕಲಿ ಗಾಂಧಿಗಳಿಗಾಗಿ ಮೌನವಾಗಿರುವುದು ನಾಚಿಗೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮೌನ ಪ್ರತಿಭಟನೆಗೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಕಾರಣವಿಲ್ಲದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಎರಡನೇ ಬಾರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿದೆ ಎಂದು ಆರೋಪಿಸಿ ಜುಲೈ 26 ರಂದು ಕಾಂಗ್ರೆಸ್ ಮೌನ ಸತ್ಯಾಗ್ರಹಕ್ಕೆ ಮುಂದಾಗಿದೆ.
ಈ ಸಂಬಂಧ ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ಕಿಡಿಕಾರಿದ್ದು, ಕಳ್ಳನಾಯಕಿಯ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ಸಿಗರು ದಿವ್ಯ ಮೌನಕ್ಕೆ ಶರಣಾಗುತ್ತಿರುವುದು ಹೊಸತೇನಲ್ಲ.ಈ ಹಿಂದೆ ಹಿಂದೂಗಳ ಮೇಲೆ, ದಲಿತರ ಮೇಲೆ, ಮಹಿಳೆಯರ ಮೇಲೆ, ರೈತರ ಮೇಲೆ, ಸೈನಿಕರ ಮೇಲೆ, ಬಡವರ ಮೇಲೆ ದೌರ್ಜನ್ಯವಾದಾಗ ಕಾಂಗ್ರೆಸ್ ಬಾಯಿ ಬಿಟ್ಟಿತ್ತೇ ಎಂದು ಪ್ರಶ್ನಿಸಿದೆ.
ನೀರು ಕೇಳಿದ ರೈತರಿಗೆ ಅಂದು ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿತ್ತು.
ಪೊಲೀಸರ ನಡೆಯ ಬಗ್ಗೆ #ಮೀರ್ಸಾದಿಕ್ ಅಸೆಂಬ್ಲಿಯಲ್ಲಿ ಮೊಸಳೆ ಕಣ್ಣೀರು ಹಾಕಿದ್ದರು.
ಒಂದು ಕಡೆ ಚಿವುಟಿ, ಮತ್ತೊಂದೆಡೆ ತಲೆ ಸವರುವುದು, ಒಂದು ಕಡೆ ಆರ್ಭಟಿಸಿ, ಮತ್ತೊಂದೆಡೆ ಮೌನಕ್ಕೆ ಜಾರುವುದು ಹೊಸತೇನಲ್ಲ.#ಮೌನಿಕಾಂಗ್ರೆಸ್
— BJP Karnataka (@BJP4Karnataka) July 25, 2022
ದಲಿತ ನಾಯಕ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಮತಾಂಧರು ದಾಳಿ ನಡೆಸಿದಾಗ, ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಮೌನವಾಗಿತ್ತು. ದಲಿತ ನಾಯಕನ ವಿಚಾರದಲ್ಲೂ ಕಾಂಗ್ರೆಸ್ ಮೌನವಾಗಿದ್ದೇಕೆ?
ವ್ಯಾಪಾರಿಯೊಬ್ಬನ ಕಲ್ಲಂಗಡಿ ಹಣ್ಣು ಕೊಚ್ಚಿ ಹಾಕಿದಾಗ ಆರ್ಭಟಿಸಿ ಬೊಬ್ಬಿರಿದ ಕಾಂಗ್ರೆಸ್ ನಾಯಕರು, ರಾಜಸ್ಥಾನದ ಕನ್ನಯ್ಯ ಲಾಲ್ ಅವರನ್ನು ಕೊಚ್ಚಿಹಾಕಿದ್ದಾಗ, ಚಾಮರಾಜಪೇಟೆಯ ಚಂದುವನ್ನು ಹತ್ಯೆಗೈದಾಗ ಮೌನ ಪ್ರತಿಭಟನೆ ಮಾಡಿದರು. ಹಿಂದೂ ದ್ವೇಷಿ ಕಾಂಗ್ರೆಸ್ಸಿಗರು, ಅವರಿಗೆ ಬೇಕಾದಾಗ ಮಾತ್ರ ಮೌನ ಸತ್ಯಾಗ್ರಹ ಮಾಡುತ್ತಾರೆ!
ನೀರು ಕೇಳಿದ ರೈತರಿಗೆ ಅಂದು ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿತ್ತು.ಪೊಲೀಸರ ನಡೆಯ ಬಗ್ಗೆ #ಮೀರ್ಸಾದಿಕ್ ಅಸೆಂಬ್ಲಿಯಲ್ಲಿ ಮೊಸಳೆ ಕಣ್ಣೀರು ಹಾಕಿದ್ದರು.ಒಂದು ಕಡೆ ಚಿವುಟಿ, ಮತ್ತೊಂದೆಡೆ ತಲೆ ಸವರುವುದು, ಒಂದು ಕಡೆ ಆರ್ಭಟಿಸಿ, ಮತ್ತೊಂದೆಡೆ ಮೌನಕ್ಕೆ ಜಾರುವುದು ಹೊಸತೇನಲ್ಲ.
ವ್ಯಾಪಾರಿಯೊಬ್ಬನ ಕಲ್ಲಂಗಡಿ ಹಣ್ಣು ಕೊಚ್ಚಿ ಹಾಕಿದಾಗ ಆರ್ಭಟಿಸಿ ಬೊಬ್ಬಿರಿದ ಕಾಂಗ್ರೆಸ್ ನಾಯಕರು, ರಾಜಸ್ಥಾನದ ಕನ್ನಯ್ಯ ಲಾಲ್ ಅವರನ್ನು ಕೊಚ್ಚಿಹಾಕಿದ್ದಾಗ, ಚಾಮರಾಜಪೇಟೆಯ ಚಂದುವನ್ನು ಹತ್ಯೆಗೈದಾಗ ಮೌನ ಪ್ರತಿಭಟನೆ ಮಾಡಿದರು.
ಹಿಂದೂ ದ್ವೇಷಿ ಕಾಂಗ್ರೆಸ್ಸಿಗರು, ಅವರಿಗೆ ಬೇಕಾದಾಗ ಮಾತ್ರ ಮೌನ ಸತ್ಯಾಗ್ರಹ ಮಾಡುತ್ತಾರೆ!#ಮೌನಿಕಾಂಗ್ರೆಸ್
— BJP Karnataka (@BJP4Karnataka) July 25, 2022
ಪಕ್ಷದ ವಿರುದ್ಧ, ನಾಯಕರ ವಿರುದ್ಧ ಮಾತನಾಡಿದ ಕೆಲವು ನಾಯಕರಿಗೆ ನೋಟಿಸ್ ಕೂಡಾ ನೀಡಲಿಲ್ಲ, ಪ್ರಶ್ನಿಸಲಿಲ್ಲ.ಮಹಿಳಾ ನಾಯಕಿಯೊಬ್ಬರು ಪಕ್ಷದ ನಿಲುವು ಪ್ರಶ್ನಿಸಿದಾಗ ನೋಟಿಸ್ ನೀಡಿದರು.ಕಾಂಗ್ರೆಸ್ ಪಕ್ಷದಲ್ಲಿ ಮೌನ, ಕಾಗೆ ಬಂಗಾರ!
ನಕಲಿ ಗಾಂಧಿ ಕುಟುಂಬದ ಗುಲಾಮಗಿರಿತನ ಪ್ರದರ್ಶನ ಮಾಡಿಕೊಂಡು ಸಮಯ ಕಳೆಯುವ ಕಾಂಗ್ರೆಸ್ ನಾಯಕರಿಂದ ಈಗ ಅದೇ ನಕಲಿ ಗಾಂಧಿ ಕುಟುಂಬದವರಿಗಾಗಿ ಮೌನ ಪ್ರತಿಭಟನೆಯಂತೆ! ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಹೊತ್ತಿನಲ್ಲೂ, ದೇಶದ ಶ್ರೇಷ್ಠತೆಯ ಬಗ್ಗೆ ಸಾರುವ ಬದಲು ನಕಲಿ ಗಾಂಧಿಗಳಿಗಾಗಿ ಮೌನವಾಗಿರುವುದು ನಾಚಿಗೆಗೇಡಿನ ಸಂಗತಿ ಎಂದು ಬಿಜೆಪಿ ಕಿಡಿಕಾರಿದೆ.








