ಬಿಹಾರ : ಅಕ್ರಮ ಪಟಾಕಿ ಕಾರ್ಖಾನೆಯೊಂದ್ರಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮಕ್ಕಳೂ ಸೇರಿದಂತೆ 5 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ..
ಸರನ್ ಜಿಲ್ಲೆಯಲ್ಲಿ ಅಕ್ರಮ ಪಟಾಕಿ ಘಟಕದಲ್ಲಿ ಭಾನುವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಇಬ್ಬರು ಮಕ್ಕಳು ಮತ್ತು ಮಹಿಳೆ ಸೇರಿದಂತೆ ಕನಿಷ್ಠ ಐವರು ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಅಕ್ರಮ ಪಟಾಕಿ ಕಾರ್ಖಾನೆ ಇದ್ದ ಖೋಡೈಬಾಗ್ ಬಜಾರ್‌ನಲ್ಲಿನ ಮೂರು ಅಂತಸ್ತಿನ ಕಟ್ಟಡ ಸಹ ಕುಸಿದಿದೆ..
ಕಾರ್ಖಾನೆಯೊಳಗೆ ಇರಿಸಲಾಗಿದ್ದ ಎಲ್ ಪಿಜಿ ಸಿಲಿಂಡರ್ ಗಳು ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ..
ಮೃತರ ಪೈಕಿ ಅಕ್ರಮ ಕಾರ್ಖಾನೆಯನ್ನು ನಡೆಸುತ್ತಿದ್ದ ಮಾಲೀಕ 22 ವರ್ಷದ ಶಬೀರ್ ಹುಸೇನ್ ಸಹ ಎಬ್ಬ ಎನ್ನಲಾಗಿದೆ…
ಜೊತೆಗೆ ಮೃತರಲ್ಲಿ 35 ವರ್ಷದ ಮುಲಾಜಿಮ್, 32 ವರ್ಷದ ಶಬಾನಾ ಖಾತೂನ್ ಮತ್ತು ಐದು ವರ್ಷದ ಶಾಜಾದ್ ಸಹ ಘಟನೆಯಲ್ಲಿ ಮೃತಪಟ್ಟಿರೋದಾಗಿ ತಿಳಿದುಬಂದಿದೆ..
ಅಲ್ಲದೇ ಘಟನೆಯಲ್ಲಿ ಸಾವಿಗೀಡಾಗಿರುವ ನಾಲ್ಕು ವರ್ಷದ ಇನ್ನೊಂದು ಮಗುವಿನ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ಮೃತದೇಹಕ್ಕಾಗಿ ಹುಡುಕಾಟ ಜಾರಿಯಲ್ಲಿದೆ..








