Umesh Katti| ದಲಿತ ಸಿಎಂ ಯಾಕಾಗಬಾರದು..? ದಲಿತ ಸಿಎಂ ಬಗ್ಗೆ ಕತ್ತಿ ಹೇಳಿದ್ದೇನು ?
ವಿಜಯಪುರ : ಬಿಜೆಪಿಯಲ್ಲಿ ಯಾರಾದರೂ ಮುಖ್ಯಮಂತ್ರಿಯಾಗಬಹುದು, ದಲಿತ ಸಿಎಂ ಯಾಕಾಗಬಾರದು, ದಲಿತರು ಆಗಿಲ್ಲ ಅಂದ್ರೆ ಆಗಲೇಬೇಕು ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬಿಜೆಪಿಯಲ್ಲಿ ದಲಿತ ಸಿಎಂ ಆಗ್ತಾರೆ ಎಂಬ ಚಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿಯಲ್ಲಿ ಯಾರಾದರೂ ಸಿಎಂ ಆಗಬಹುದು.
ಈಗ ಬೊಮ್ಮಾಯಿ ಆಗಿದ್ದಾರೆ, ಹಿಂದೆ ಯಡಿಯೂರಪ್ಪ ಇದ್ರು. ದಲಿತ ಸಿಎಂ ಆಗಬಹುದು, ದಲಿತ ಸಿಎಂ ಯಾಕಾಗಬಾರದು ಎಂದು ಹೇಳಿದರು.
ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ನನಗೆ ಮಾಹಿತಿ ಇಲ್ಲ, ಯಾವುದೇ ಸಚಿವ ಸಂಪುಟ ವಿಸ್ತರಣೆ ಇಲ್ಲ.
ಎಲೆಕ್ಷನ್ ಬರುವ ಸಂದರ್ಭ ಇರುವುದರಿಂದ ಈಗಾಗಲೇ ಮಂತ್ರಿಮಂಡಲ ಸಮೃದ್ಧ ವಾಗಿದೆ.
ಸಿಎಂ ಬೊಮ್ಮಾಯಿ ರಾಜ್ಯದ ಉದ್ದಗಲಕ್ಕೂ ಕಾರ್ಯಕ್ರಮ ರೂಪಿಸುವುದರ ಜೊತೆಗೆ ಒಳ್ಳೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ನನಗೂ ಸಿಎಂ ಆಗುವ ಹಂಬಲವಿದೆ ಎಂದು ಕತ್ತಿ, ಇನ್ನೂ 15ವರ್ಷ ವೇಳೆ ಇದೆ, ಕಾದು ನೋಡೋಣ ಎಂದು ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದರು.