ಸೆನ್ಸಾರ್ ಪಾಸಾದ ‘ವಿಕಿಪೀಡಿಯ’ ರಿಲೀಸ್ ಗೆ ರೆಡಿ… ವಿಕಿಪೀಡಿಯ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿದ್ದಾರೆ ಯಶವಂತ್
ಮಾಹಿತಿಯ ಜ್ಞಾನಕೋಶ ಅಂತಾಲೇ ಕರೆಸಿಕೊಳ್ಳುವ ಜಾಲತಾಣ ವಿಕಿಪೀಡಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಇದೇ ವಿಕಿಪೀಡಿಯ ಎಂಬ ಹೆಸರಿನಲ್ಲಿ ಕನ್ನಡದಲ್ಲೊಂದು ಸಿನಿಮಾ ಬರ್ತಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ ಗೆ ಸಜ್ಜಾಗಿದೆ.
ಸತ್ಯಂ ಶಿವಂ ಸುಂದರಂ, ಒಂದೂರಲ್ಲಿ ರಾಜರಾಣಿ, ಮಹಾದೇವಿ, ಶಾಂತಂಪಾಪಂ, ಯಾರೇ ನೀ ಮೋಹಿನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಯಶವಂತ್ ವಿಕಿಪೀಡಿಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿದ್ದಾರೆ. ವಿಕಾಸ್ ಎಂಬ ಪಾತ್ರದಲ್ಲಿ ಯಶವಂತ್ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ನಟಿಸಿದ್ದಾರೆ.
ಈಗಾಗಲೇ ಮೋಷನ್ ಪೋಸ್ಟರ್ ಹಾಗೂ ತನು ಮನ ಹಾಡಿನ ಮೂಲಕ ಟಾಕ್ ಕ್ರಿಯೇಟ್ ಮಾಡಿರುವ ವಿಕಿಪೀಡಿಯ ಸಿನಿಮಾಗೆ ಸೋಮು ಹೊಯ್ಸಳ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಡ್ರಾಮಾ, ಎಮೋಷನಲ್, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ವಿಕಿಪೀಡಿಯ ಚಿತ್ರಕ್ಕೆ ಚಿದಾನಂದ್ ಹೆಚ್ ಕೆ ಕ್ಯಾಮೆರಾ, ರಾಕೇಶ್ ಮತ್ತು ನಿಲೀಮ ರಾವ್ ಸಂಗೀತ, ರವಿಚಂದ್ರನ್ ಸಿ ಸಂಕಲನ ಸಿನಿಮಾಕ್ಕಿದೆ. ರಫ್ ಕಟ್ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರುವ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಶೀರ್ಘದಲ್ಲಿಯೇ ಚಿತ್ರ ತೆರೆಗೆ ಬರಲಿದೆ.