Ind Vs WI 2nd ODI : ನಿಮ್ಮ ತಂಡದ ಅತ್ಯುತ್ತಮ ಸ್ಪಿನ್ನರ್ ಯಾರು ಅಂತಾ ಗೊತ್ತಿಲ್ಲವಾ..?
ವೆಸ್ಟ್ ಇಂಡೀಸ್ ಜೊತೆಗಿನ ಎರಡನೇ ಏಕದಿನ ಪಂದ್ಯದಲ್ಲಿ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿಷಯದಲ್ಲಿ ಕ್ಯಾಪ್ಟನ್ ಶಿಖರ್ ಧವನ್ ತೆಗೆದುಕೊಂಡ ನಿರ್ಧಾರ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಮುರಳಿ ಕಾರ್ತಿಕ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪಂದ್ಯದ 17ನೇ ಓವರ್ ವರೆಗೂ ಚಹಾಲ್ ಕೈಗೆ ಚೆಂಡು ನೀಡದೇ ಇರುವುದಕ್ಕೆ ಕಾರ್ತಿಕ್ ಬೇಸರ ಹೊರಹಾಕಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದತ 50 ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 311 ರನ್ ಗಳಿಸಿತ್ತು. ವಿಂಡೀಸ್ ಪರ ಓಪನರ್ ಹೋಪ್ 115 ರನ್, ಕ್ಯಾಪ್ಟನ್ ನಿಕೋಲಸ್ ಪೂರನ್ 74 ರನ್ ಗಳಿಸಿದ್ರು.
ಪಂದ್ಯ ಗೆಲ್ಲಲು 312 ರನ್ ಗಳ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ 49.4 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಭಾರತದ ಪರ ಶ್ರೇಯಸ್ ಅಯ್ಯರ್ 63, ಅಕ್ಷರ್ ಪಟೇಲ್ 64, ಸಂಜು ಸ್ಯಾಮ್ಸನ್ 54 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ರು.
ಈ ಪಂದ್ಯದ ಬಗ್ಗೆ ಮುರಳಿ ಕಾರ್ತಿಕ್ ಮಾತನಾಡಿದ್ದು, ಸಿನಿಯರ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರನ್ನ ಟೀಂ ಮ್ಯಾನೇಜ್ ಮೆಂಟ್ ಯಾಕೆ ಬೇಗ ಬೌಲಿಂಗ್ ಗೆ ತರಲಿಲ್ಲ ಅನ್ನೋದು ಗೊತ್ತಾಗುತ್ತಿಲ್ಲ.
ದೀಪಕ್ ಹೂಡಾ ಅವರಿಂದ ಬೌಲಿಂಗ್ ಮಾಡಿಸಿದ್ದಕ್ಕೆ ನನಗೆ ಯಾವುದೇ ಅಭ್ಯಂತರ ಇಲ್ಲ.
ಆದ್ರೆ ನಿಮ್ಮ ತಂಡದ ಅತ್ಯುತ್ತಮ ಸ್ಪಿನ್ನರ್ ಯಾರು ಎಂಬೋದು ನಿಮಗೆ ಗೊತ್ತಿರಬೇಕಲ್ಲವೇ..? ಆದ್ರೂ ಚಾಹಲ್ ಅವರನ್ನ 17ನೇ ಓವರ್ ವರೆಗೂ ಯಾಕೆ ಬೌಲಿಂಗ್ ಗೆ ತರಲಿಲ್ಲ ಎಂದು ಪ್ರಶ್ನಿಸಿದರು.
ವಿಕೆಟ್ ತೆಗೆದುಕೊಳ್ಳುವ ತಾಕತ್ತು ಇರುವ ಸ್ಪಿನ್ನರ್ ಚಹಾಲ್ ಗೆ ಬೇಗ ಬೌಲಿಂಗ್ ನೀಡದೇ ಇದ್ದದ್ದಕ್ಕೆ ಕಾರ್ತಿಕ್ ಬೇಸರ ಹೊರಹಾಕಿದ್ದಾರೆ.
ಮಿಡಲ್ ಓವರ್ ನಲ್ಲಿ ವಿಕೆಟ್ ತೆಗೆಯದೇ ಇದ್ದ ಕಾರಣ ವಿಂಡೀಸ್ ಟಿ 20 ಮಾದರಿಯಲ್ಲಿ ಅಬ್ಬರಿಸಿತ್ತು.
ಸರಿಯಾದ ವ್ಯೂಹಗಳನ್ನು ಹೂಡಿದ್ದರೇ ಕಡಿಮೆ ಸ್ಕೋರ್ ಗೆ ವಿಂಡೀಸ್ ತಂಡವನ್ನು ಕಟ್ಟಿಹಾಕುವ ಅವಕಾಶವಿತ್ತು ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಈ ಪಂದ್ಯದಲ್ಲಿ 9 ಓವರ್ ಬೌಲಿಂಗ್ ಮಾಡಿದ ದೀಪಕ್ ಹೂಡಾ, 42 ರನ್ ಗಳನ್ನು ನೀಡಿ 1 ವಿಕೆಟ್ ಪಡೆದರು.
ಚಹಾಲ್ ಒಂಭತ್ತು ಓವರ್ ಬೌಲಿಂಗ್ ಮಾಡಿ 69 ರನ್ ಗಳನ್ನು ನೀಡಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ.