ಭಾರತೀಯ ಸಿನಿಮಾರಂಗದ ‘ರೋಬೋ’.. ದಿ ಲೆಜೆಂಡರಿ ನಟ ,,, ಸೂಪರ್ ಸ್ಟಾರ್ ರಜನಿಕಾಂತ್ ಗೆ ಕೇವಲ ಭಾರತದ ಮೂಲೆಮೂಲೆಯಲ್ಲಷ್ಟೇ ಅಲ್ದೇ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ.. ರಜನಿಯನ್ನ ದೇವರಂತೆ ಆರಾಧಿಸುವ ಫ್ಯಾನ್ಸ್ ಇದ್ದಾರೆ… ನೇಮ್ ಫೇಮ್ ಎಲ್ಲವೂ ಇದೆ… ಸಾಲು ಸಾಲು ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ.. 70 ವರ್ಷ ದಾಟಿದ್ರೂ ಅವರ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ.. ಈಗಲೂ ರಜನಿ ಜೊತೆ ಸಿನಿಮಾ ಮಾಡಲೂ ನಿರ್ದೇಶಕರು ಕಾಯುತ್ತಿದ್ದಾರೆ..
ಆದ್ರೆ ರಜನಿಕಾಂತ್ ಅವರ ವಯಕ್ತಿಕ ಜೀವನದಲ್ಲಿಇ ಸಾಕಷ್ಟು ಕೊರಗಿದೆ.. ವಯಕ್ತಿಕವಾಗಿ ರಜನಿಕಾಂತ್ ಅವರು ಖುಷಿಯಾಗಿಲ್ಲ.. ನೆಮ್ಮದಿಯಿಲ್ಲ. ಇದನ್ನ ಅವರೇ ಹೇಳಿಕೊಂಡಿದ್ದಾರೆ.. ಹೌದು..!! ತಮ್ಮ ಬದುಕಿನಲ್ಲಿ 10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲ ಅಂತಾ ಇತ್ತೀಚಿನ ಸಂದರ್ಶನವೊಂದರಲ್ಲಿ ರಜನೀಕಾಂತ್ ಅವರೇ ಹೇಳಿರುವುದು ಇದೀಗ ಸಖತ್ ವೈರಲ್ ಆಗಿದೆ.
ಅವರು ಅನಾರೋಗ್ಯದಿಂದ ಬಳಲಿ ರಾಜಕೀಯದಿಂದಲೂ ಹಿಂದೆ ಸರಿದಿದ್ದು , ಇತ್ತೀಚೆಗೆ ಅವರ ಹಿರಿಇಯ ಪುತ್ರಿ ಐಶ್ವರ್ಯ ಅವರ ದಾಂಪತ್ಯ ಮುರಿದು ಬಿದ್ದದ್ದು ಇದೆಲ್ಲದರಿಂದ ರಜನಿಕಾಂತ್ ಅವರು ಕೊರಗಿದ್ಧಾರೆ ಎಂಬುವುದು ಅವರ ಹೇಳಿಕೆಯಿಂದ ಗೊತ್ತಾಗ್ತಿದೆ.. ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ಸ್ಟಾರ್ ನಟ ಧನುಷ್ ಜೊತೆಗೆ ವಿವಾಹದ 18 ವರ್ಷಗಳ ನಂತರ ಈ ವರ್ಷದ ಆರಂಭದಲ್ಲಿ ಅಂದ್ರೆ ಜನವರಿ 17 ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದಾರೆ.. ಮಗಳ ಡಿವೋರ್ಸ್ ರಜನಿಕಾಂತ್ ಅವರ ಮನಸ್ಸಿಗೆ ನೋವುಂಟುಮಾಡಿರಬಹುದೆಂಬ ಚರ್ಚೆಗಳಿವೆ..