29 ವರ್ಷದ ಯುವಕನ ಜೊತೆಗೆ ಸಂಬಂಧ ಬೆಳೆಸಿದ್ದ 55 ವರ್ಷದ ಮಹಿಳೆಗೆ ಇದೀಗ ಯುವಕ ಕೈಕೊಟ್ಟಿದ್ದು , ನ್ಯಾಯಕ್ಕಾಗಿ ಮಹಿಳೆಯು ಕಾನೂನಿನ ಮೊರೆ ಹೋಗಿದ್ದಾರೆ..
ಮದುವೆಯಾಗುವುದಾಗಿ ನಂಬಿಸಿ ವಿದೇಶಿ ಮಹಿಳೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ 29 ರ ಯುವಕ ಮದುವೆ ಮಾಡಿಕೊಳ್ಳುವಂತೆ ಪ್ರಸ್ತಾಪಿಸುತ್ತಿದ್ದಂತೆ ಆಕೆಯನ್ನ ಬಿಟ್ಟು ಎಸ್ಕೇಪ್ ಆಗಿದ್ದ.. ಅಲ್ದೇ ಮಹಿಳೆಯ ನಂಬರ್ ಬ್ಲಾಕ್ ಮಾಡಿದ್ದಾನೆ..
ದೆಹಲಿಯ ಸಮೀಪದಲ್ಲೇ ಇರುವ ಗುರುಗ್ರಾಮದಲ್ಲಿ ತೈವಾನ್ ಮೂಲದ ಮಹಿಳೆಯೊಂದಿಗೆ ರವೀಂದ್ರ ವಿಶ್ವಕರ್ಮ ಎಂಬಾತ ದೈಹಿಕ ಸಂಪರ್ಕ ಬೆಳೆಸಿದ್ದ..
ಇದೀಗ ಮದುವೆಯ ನೆಪದಲ್ಲಿ ಯುವಕ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ದೂರು ದಾಖಲಿಸಿದ್ದಾರೆ. ಅಲ್ಲದೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
2017ರಲ್ಲಿ ಭಾರತಕ್ಕೆ ಬಂದ ತೈವಾನ್ ಮೂಲದ ಮಹಿಳೆ ಅಂದಿನಿಂದ ದೆಹಲಿಯ ಗುರುಗ್ರಾಮ್ ನ ಸೆಕ್ಟರ್-52ನಲ್ಲಿ ವಾಸಿಸುತ್ತಿದ್ದರು. ಇವರು NGO ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಅವರಿಗೆ 29 ವರ್ಷದ ರವೀಂದ್ರ ವಿಶ್ವಕರ್ಮ ಎಂಬ ವ್ಯಕ್ತಿಯೊಂದಿಗೆ ಗೆಳೆತನವಾಗಿ ಅದು ಪ್ರೀತಿಗೆ ತಿರುಗಿದೆ.. ರವೀಂದ್ರ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ.
ಇದೇ ನೆಪದಲ್ಲಿ ಹಲವು ಬಾರಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಮಹಿಳೆ ಅವನನ್ನು ಮದುವೆಯಾಗುವುದಾಗಿ ಕೇಳಿದಾಗ ಆಕೆಯನ್ನ ಬಬಿಟ್ಟು ಓಡಿಹೋಗಿದ್ದು , ಇದೀಗ ಪಪೊಲೀಸರಿಂದ ಅರೆಸ್ಟ್ ಆಗಿದ್ದಾನೆ..