ಮಂಡ್ಯ : ಟ್ರಯಲ್ ಬ್ಲಾಸ್ಟ್ ಬಗ್ಗೆ ಸ್ಪಷ್ಟ ನಿಲುವು ತಿಳಿಸುವಂತೆ ಆಗ್ರಹಿಸಿ ಮಂಡ್ಯದ ಕಟ್ಟೇರಿ ಗ್ರಾಮದಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದಾರೆ.. ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಮುಂದೂಡಿರುವುದಾಗಿ ಡಿಸಿ ಹೇಳಿದ್ದಾರೆ..
ಮತ್ತೊಂದೆಡೆ ವಿಜ್ಞಾನಿಗಳ ತಂಡ KRSನ ಗೆಸ್ಟ್ ಹೌಸ್ ನಲ್ಲೇ ಉಳಿದಿದೆ.. ವಾಪಸ್ ಕಳುಹಿಸದೇ ಅವರನ್ನ ಜಿಲ್ಲಾಡಳಿತ ಉಳಿಕೊಂಡಿದೆ.
ಜಿಲ್ಲಾಡಳಿತದ ನಡೆ ಬಗ್ಗೆ ರೈತ ಸಂಘದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.. ವಿಜ್ಞಾನಿಗಳ ತಂಡವನ್ನ ವಾಪಸ್ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ..
ಬೇಬಿ ಬೆಟ್ಟದ ಬಗ್ಗೆ ಸಂಪೂರ್ಣ ದಾಖಲೆ ನೀಡುವಂತೆ ರೈತರು ಪಟ್ಟು ಹಿಡಿದಿದ್ದಾರೆ.. ಕಟ್ಟೇರಿ ಬಳಿ ಪ್ರತಿಭಟನೆ ಆರಂಭಿಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ,.








