WI-vs-IND-3rd-odi | ಮಾನ ಉಳಿಸಿಕೊಳ್ಳುತ್ತಾ ವಿಂಡೀಸ್..?
ಕೆರಿಬಿಯನ್ ನಾಡಲ್ಲಿ ಇಂದು ಅಂತಿಮ ಏಕದಿನ ಹೋರಾಟ ನಡೆಯಲಿದೆ.
ಈಗಾಗಲೇ ಎರಡು ಏಕದಿನ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಐತಿಹಾಸಿಕ ಕ್ಲೀಸ್ ಸ್ವೀಪ್ ಸಾಧನೆ ಮಾಡುವತ್ತ ಚಿತ್ತನೆಟ್ಟಿದೆ.
ಇತ್ತ ಈಗಾಗಲೇ ಏಕದಿನ ಸರಣಿಯನ್ನು ಸೋತಿರುವ ವೆಸ್ಟ್ ಇಂಡೀಸ್ ತಂಡ ವೈಟ್ ವಾಷ್ ಅವಮಾನದಿಂದ ತಪ್ಪಿಸಿಕೊಳ್ಳಲು ತಯಾರಿ ನಡೆಸಿದೆ.
ಹೀಗಾಗಿ ಪೋರ್ಟ್ ಆಫ್ ಸ್ಟೇನ್ ನಲ್ಲಿ ನಡೆಯುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಪ್ರಸ್ತುತ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿರುವುದರಿಂದ ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ಒಂದೆರಡು ಬದಲಾವಣೆಗಳು ಆಗುವ ಸಾಧ್ಯತೆಗಳು ಹೆಚ್ಚಾಗಿವೆ.
ನಾಯಕ ಶಿಖರ್ ಧವನ್ ಜೊತೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ.
ಶ್ರೇಯಸ್ ಅಯ್ಯರ್ ಒನ್ ಡೌನ್‌ನಲ್ಲಿ ಆಡಿದರೆ ಸೂರ್ಯ ಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ.
ದೀಪಕ್ ಹೂಡ 5ರಲ್ಲಿ ಆಡಿದರೆ, ಸಂಜು ಸ್ಯಾಮ್ಸನ್ 6ನೇ ಕ್ರಮಾಂಕದಲ್ಲಿ ಆಡುತ್ತಾರೆ.
ಅಕ್ಸರ್ ಪಟೇಲ್ 7ನೇ ಕ್ರಮಾಂಕದಲ್ಲಿ ಆಡುವ ಮ್ಯಾಚ್ ವಿನ್ನಿಂಗ್ ಪ್ಲೇಯರ್.
ಶಾರ್ದೂಲ್ ಕೂಡ ಬ್ಯಾಟಿಂಗ್ ಮಾಡಬಲ್ಲ ತಾಕತ್ತು ಹೊಂದಿದ್ದಾರೆ.
ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಆದರೆ ಆವೇಶ್ ಖಾನ್ ಬದಲಿಗೆ ಅರ್ಶದೀಪ್ ಗೆ ಅವಕಾಶ ಸಿಗಬಹುದು.
ಯಜುವೇಂದ್ರ ಚಹಲ್ ಟ್ರಂಪ್ ಕಾರ್ಡ್ ಸ್ಪಿನ್ನರ್ ಆಗಿದ್ದು, ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮತ್ತೊಂದು ಕಡೆ ವೆಸ್ಟ್ ಇಂಡೀಸ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ.
ಆದ್ರೆ ತಂಡಕ್ಕೆ ಅದೃಷ್ಠದ ಬಲವಿಲ್ಲ. ಬ್ಯಾಟಿಂಗ್ ನಲ್ಲಿ ಬೊಂಬಾಟ್ ಪ್ರದರ್ಶನ ನೀಡುತ್ತಿರುವ ಕೆರಬಿಯನ್ಸ್, ಬೌಲಿಂಗ್ ನಲ್ಲಿ ಕೊಂಚ ಯಡವುತ್ತಿದ್ದಾರೆ.
ವಿಂಡೀಸ್ ಪರ ಕೈಲ್ ಮೇಯರ್ಸ್, ಶೈ ಹೋಪ್ ಟ್ರಂಪ್ ಕಾರ್ಡ್ ಬ್ಯಾಟರ್ ಗಳಾಗಿದ್ದು, ಟೀಂ ಇಂಡಿಯಾ ಬೌಲರ್ ಗಳನ್ನು ಬೆಂಡೆತ್ತುತ್ತಿದ್ದಾರೆ.
ನಾಯಕ ನಿಕೋಲಸ್ ಪೂರನ್ ಕೂಡ ಒಳ್ಳೆಯ ಟಚ್ ನಲ್ಲಿ ಕಾಣಿಸಿಕೊಂಡಿದ್ದು, ರೋವ್ಮನ್ ಪೊವಲ್, ರೊಮೆರಿಯೋ ಶೆಫರ್ಡ್ ಮತ್ತು ಅಕಿಲ್ ಹೊಸೈನ್ ರಂತಹ ಆಲ್‌ರೌಂಡರ್‌ಗಳು ಚೆಂಡನ್ನು ಬೌಂಡರಿ ಗೆರೆ ದಾಟಿಸಬಲ್ಲರು.
ಆದ್ರೆ ಬೌಲಿಂಗ್ ನಲ್ಲಿ ತಂಡದ ಪ್ರಮುಖ ಬೌಲರ್ ಗಳಾದ ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್ ವಿಕೆಟ್ ಬರ ಎದುರಿಸುತ್ತಿದ್ದಾರೆ.
ಜೊತೆಗೆ ಇನ್ನುಳಿದ ಬೌಲರ್ ಗಳು ಕೂಡ ಒಳ್ಳೆಯ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದು ತಂಡದ ಮೈನಸ್ ಪಾಯಿಂಟ್ ಆಗಿದೆ.