Belgaum | ಮಗುವಿನ ಕತ್ತು ಸೀಳಿ, ಪತ್ನಿಗೆ ಚಾಕಿ ಇರಿದ ಪತಿ.. ಕಾರಣ ಅಕ್ರಮ ಸಂಬಂಧ
ಬೆಳಗಾವಿ : ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ವ್ಯಕ್ತಿಯೋರ್ವ ಮಗುವಿನ ಕತ್ತು ಸೀಳಿ, ಹೆಂಡತಿಯ ಕತ್ತಿಗೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದಲ್ಲಿ ನಡೆದಿದೆ.
4 ವರ್ಷದ ಬಾಳೇಶ ಅಕ್ಕಣಿ ಮೃತ ಮಗುವಾಗಿದ್ದು, 27 ವರ್ಷದ ಲಕ್ಷ್ಮಿ ಅಕ್ಕಣಿ ಗಾಯಗೊಂಡವರಾಗಿದ್ದಾರೆ.

ಮುತ್ತೆಪ್ಪ ಅಕ್ಕಣಿ ಕೊಲೆ ಆರೋಪಿಯಾಗಿದ್ದಾರೆ.
ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಮುತ್ತೆಪ್ಪ ಅಕ್ಕಣಿ ತನ್ನ ಮಗುವಿನ ಕತ್ತು ಸೀಳಿದ್ದಾನೆ.
ಬಳಿಕ ತನ್ನ ಪತ್ನಿ ಲಕ್ಷ್ಮೀ ಅಕ್ಕಣಿ ಅವರ ಕೊತ್ತಿಗೆಗೂ ಚಾಕು ಇರಿದಿದ್ದಾನೆ.
ಸದ್ಯ ಆರೋಪಿ ಮುತ್ತೆಪ್ಪ ಅಕ್ಕಣಿಯನ್ನು ಗೋಕಾಕ ಪೊಲೀಸರು ಬಂಧಿಸಿದ್ದು, ಈ ಸಂಬಂಧ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








