ಚಿಕ್ಕೋಡಿಯ ಝಾರಿ ಗಲ್ಲಿಯಲ್ಲಿ ಮಹಿಳೆಯರು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಸೀಲ್ ಡೌನ ಪ್ರದೇಶಗಳಲ್ಲಿ ಸಮರ್ಪಕವಾಗಿ ದಿನಸಿ ವಿತರಿಸುವಂತೆ ಮಹಿಳೆಯರು ಪೊಲೀಸರ ಜತೆ ವಾಗ್ವಾದಕ್ಕಿಳಿದರು.
ಕಳೆದ 2 ದಿನಗಳ ಹೀಂದೆ ತಾಯಿ ಮಗುವಿಗೆ ಕೋರೋನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಝಾರಿ ಗಲ್ಲಿಯನ್ನು ಸೀಲ್ ಡೌನ ಮಾಡಲಾಗಿದೆ.ಮನೆಯಿಂದ ಹೊರಗಡೆ ಬಾರದಂತೆ ಪೊಲೀಸರು ಖಡಕ್ ವಾನಿರ್ಂಗ್ ಮಾಡಿದ್ದಾರೆ.ಆದರೆ ಮನೆಯಿಂದ ಹೊರಗಡೆ ಬಂದ ಮಹಿಳೆಯರ ಮೇಲೆ ಪೊಲೀಸರು ದರ್ಪ ತೋರುತ್ತಿದ್ಧಾರೆ. ಪೊಲೀಸರ ವರ್ತನೆಯ ಖಂಡಿಸಿ ಪೊಲೀಸರು ಹಾಗೂ ಮಹಿಳೆಯರು ವಾಗ್ವಾದ ನಡೆಸಿದರು.
ಮಹಿಳೆಯರು ರಸ್ತೆಗಿಳಿದು ನಮ್ಮ ಮನೆ ಮನೆಗಳಿಗೆ ದಿನಸಿ ವಸ್ತುಗಳನ್ನು ವಿತರಿಸಿ ನಾವು ಮನೆಯಿಂದ ಹೊರಗಡೆ ಬರುವುದಿಲ್ಲ ಎಂದು ಮನವಿ ಮಾಡಿಕೊಂಡರು.ನಂತರ ತಹಸೀಲ್ದಾರ ಎಸ್ ಎಸ್ ಸಂಪಗಾವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಶಾಂತಗೊಳಿಸಿದರು.







