ಪಶ್ಚಿಮ ಬಂಗಾಳ ED Raid – ಅರ್ಪಿತಾ ಎರಡನೇ ಮನೆಯಲ್ಲಿ 29 ಕೋಟಿ ಪತ್ತೆ
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಮಮತಾ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಎರಡನೇ ಮನೆಯಲ್ಲಿ 29 ಕೋಟಿ ರೂಪಾಯಿ ನಗದು, 5 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಬೆಲ್ಘಾರಿಯಾದಲ್ಲಿರುವ ಅವರ ಎರಡನೇ ಫ್ಲಾಟ್ ಮೇಲೆ ಸುಮಾರು 18 ಗಂಟೆಗಳ ಕಾಲ ದಾಳಿ ನಡೆಸಿತು.
ಇ ಡಿ ಮೂಲಗಳ ಪ್ರಕಾರ, ಅರ್ಪಿತಾ ಅವರ ಫ್ಲಾಟ್‌ನಿಂದ 3 ಡೈರಿಗಳು ಸಹ ಪತ್ತೆಯಾದ್ದಿದ್ದು, ಅದರಲ್ಲಿ ವ್ಯವಹಾರವನ್ನು ಕೋಡ್‌ವರ್ಡ್ ರೀತಿ ದಾಖಲಿಸಲಾಗಿದೆ. ತನಿಖಾ ಸಂಸ್ಥೆ ಅರ್ಪಿತಾ ಮನೆಯಿಂದ 2600 ಪುಟಗಳ ದಾಖಲ ಪತ್ರಗಳನ್ನ ವಶಪಡಿಸಿಕೊಂಡಿದೆ. ಪಾರ್ಥ್ ಚರ್ಟರ್ಜಿ ಮತ್ತು ಅರ್ಪಿತಾ ಅವರ ಜಂಟಿ ಆಸ್ತಿಯನ್ನ ಉಲ್ಲೇಖಿಸುತ್ತದೆ.
ಜುಲೈ 23 ರಂದು ಸಿಕ್ಕಿತ್ತು 21 ಕೋಟಿ
ಜುಲೈ 23 ರಂದು ಜಾರಿ ನಿರ್ದೇಶನಾಲಯ ಕೈಗಾರಿಕಾ ಸಚಿವರಾದ ಸಚಿವರಾದ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಅವರ ಸ್ಥಳಗಳ ಮೇಲೆ ದಾಳಿ ನಡೆಸಿತು. ಅರ್ಪಿತಾ ಮನೆಯಲ್ಲಿ 21 ಕೋಟಿ ನಗದು ಹಾಗೂ 1 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. 500 ಮತ್ತು 2000 ರೂ.ಗಳ ನೋಟುಗಳ ಹಲವು ಬಂಡಲ್‌ಗಳನ್ನು ಬ್ಯಾಗ್‌ಗಳಲ್ಲಿ ತುಂಬಿ ಕೋಣೆಯಲ್ಲಿ ಇಡಲಾಗಿತ್ತು. ತನಿಖಾ ಸಂಸ್ಥೆಗಳು ಪಾಥ ಚಟರ್ಜಿ ಮತ್ತು ಆಪ್ತ ಸಹಾಯಕಿಯನ್ನ ಬಂಧಿಸಿವೆ. ಬುಧವಾರ ಕೈಗೊಂಡಿರುವ ಕ್ರಮದಲ್ಲಿ ಅರ್ಪಿತಾ ಮನೆಯಲ್ಲಿ ಅಪಾರ ಪ್ರಮಾಣದ 500 ಮತ್ತು 2000 ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ. ಎಣಿಕೆಯ ನಂತರ ಮೊತ್ತ 29 ಕೋಟಿ ಎಂದು ಹೇಳಲಾಗುತ್ತಿದೆ.
ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲೆ ಇಡಿ ಬುಧವಾರ ಮತ್ತೆ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಪಾರ್ಥ ಮತ್ತು ಅರ್ಪಿತಾ ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ.








