Commonwealth Games 2022 – ಭಾರ(ತ)ಕ್ಕೆ ಮೊದಲ ಚಿನ್ನ ತಂದ ಮೀರಾ ಬಾಯಿ ಚಾನು
ಟೋಕಿಯೊ ಒಲಿಂಪಿಕ್ಸ್ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ 2022 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದಿದ್ದಾರೆ. 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಕೊರಳೊಡಿದ್ದಾರೆ.
ಬರೀ ಚಿನ್ನ ಗೆದ್ದದಷ್ಟೇ ಅಲ್ಲ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮೀರಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸ್ನ್ಯಾಚ್ ಸುತ್ತಿನಲ್ಲಿ ಅತಿ ಹೆಚ್ಚು ಭಾರ ಎತ್ತಿದ ದಾಖಲೆ ಮೀರಾ ಪಾಲಾಗಿದೆ. ಸ್ನ್ಯಾಚ್ ಸುತ್ತಿನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ 113 ಕೆಜಿಯಷ್ಟು ಹೆಚ್ಚಿನ ತೂಕವನ್ನು ಎತ್ತಿದರು. ಮೀರಾ ಎತ್ತಿದ ಒಟ್ಟು ತೂಕ 201 ಕೆಜಿ.
https://twitter.com/i/status/1553456854633615360
ಮೀರಾಬಾಯಿ ಸ್ನ್ಯಾಚ್ ಸುತ್ತಿನ ಮೊದಲ ಪ್ರಯತ್ನದಲ್ಲಿ ಎತ್ತಿದ್ದು 84 ಕೆಜಿ ಭಾರ. ಎರಡನೇ ಪ್ರಯತ್ನದಲ್ಲಿ ಬರೊಬ್ಬರಿ 88 ಕೆ.ಜಿ ಭಾರ ಎತ್ತುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲೇ ಸ್ನ್ಯಾಚ್ ಸುತ್ತಿನಲ್ಲಿ ಮಹಿಳಾ ಅಥ್ಲೀಟ್ ಎತ್ತಿದ ಅತಿ ಹೆಚ್ಚು ಭಾರ ಎನ್ನುವ ದಾಖಲೆ ಮೀರಾ ಹೆಸರಿಗೆ ಸೇರಿದೆ.
ಆದರೂ ಮೀರಾ ಅವರ ಮೂರನೇ ಪ್ರಯತ್ನ ವಿಫಲವಾಯಿತು. ಮೂರನೇ ಯತ್ನದಲ್ಲಿ ಮೀರಾ 90 ಕೆ.ಜಿ ಭಾರ ಎತ್ತಲು ಯೋಚಿಸಿದ್ದರಾದರೂ ಬ್ಯಾಲೆನ್ಸ್ ತಪ್ಪಿ ವಿಫಲವಾಯಿತು. 90 ಕೆಜಿ ಎತ್ತಲು ಸಾಧ್ಯವಾಗದಿದ್ದರೂ ಸ್ನ್ಯಾಚ್ ಸುತ್ತಿನಲ್ಲಿ ಮೀರಾ ಅಗ್ರಸ್ಥಾನದಲ್ಲಿಯೇ ಇದ್ದರು. ಬೆಳ್ಳಿ ಪದಕ ಗೆದ್ದ ವೇಟ್ಲಿಫ್ಟರ್ಗಿಂತ 12 ಕೆಜಿ ವ್ಯತ್ಯಾಸದಲ್ಲಿ ಮುನ್ನಡೆ ಕಾಯ್ದುಕೊಂಡರು.
ಮೀರಾಬಾಯಿ ಚಾನು ಕ್ಲೀನ್ ಅಂಡ್ ಜರ್ಕ್ನ ಮೊದಲ ಸುತ್ತಿನಲ್ಲಿ 109 ಕೆಜಿ ಭಾರ ಎತ್ತಿದರು. ಅಲ್ಲಿಗೆ ಸ್ವರ್ಣ ಪದಕ ಭಾರತಕ್ಕೆ ಫಿಕ್ಸ್ ಆಗಿತ್ತು. ಮೀರಾ ಹತ್ತಿರವೂ ಯಾರೂ ಬರಲಿಲ್ಲ. ಆದ್ರೂ ಮೀರಾ ಎರಡನೇ ಪ್ರಯತ್ನದಲ್ಲಿ 113 ಕೆಜಿ, ಮೂರನೇ ಪ್ರಯತ್ನದಲ್ಲಿ 115 ಕೆಜಿ ಭಾರ ಎತ್ತುವಲ್ಲಿ ಪ್ರಯತ್ನ ನಡೆಸಿ ವಿಫಲರಾದ್ರೂ ಆದರೂ ಮೀರಾ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.
Commonwealth Games 2022 – Mirabai Chanu Wins Historic Gold Medal In Birmingham








