ಭಾರತದಲ್ಲಿ ಅನೇಕ ನಂಬಿಕೆಗಳನ್ನ ಹಿಂದಿನಿಂದಲೂ ನಂಬುತ್ತಾ ಬಂದಿದ್ದೇವೆ , ಕೆಲ ರಿವಾಜುಗಳನ್ನ ಅನುಸರಿಸುತ್ತಾ ಬಂದಿದ್ದೀವಿ.. ಅದಕ್ಕೆಲ್ಲಾ ಆಗಿನ ಹಿರಿಯರ ಅನುಭವಗಳು , ಅವರ ಮುಂದಾಲೋಚನೆಗಳು , ವೈಜ್ಞಾನಿಕ ಕಾರಣಗಳಿವೆ..
ನಾವು ಲಕ್ಷ್ಮಿಯನ್ನ ನಾವು ಹಣ , ಒಡವೆ ರೀತಿಯಲ್ಲಿ ಕಾಣ್ತೇವೆ. ಸಹಜವಾಗಿ ಕತ್ತಲಾದ ಬಳಿಕ ಅಕಸ್ಮಾತ್ ಆಗಿ ಕಸ ಗುಡಿಸಿದಾಗ ಒಡವೆ ಅಥವ ದುಡ್ಡು ಬಿದ್ದಿದ್ದರೂ ಕಾಣಿಸುವುದಿಲ್ಲ ಕಸದ ಜೊತೆಗೆ ಹೊರಟು ಹೋಗುತ್ತೆ ಅನ್ನೋದು ನಿಜವಾದ ಕಾರಣ… ಹೀಗಾಗಿ ಕಸ ಗುಡಿಸಬಾರದು ಲಕ್ಷ್ಮಿ ಹೊರಟು ಹೋಗ್ತಾಳೆ ಎನ್ನುತ್ತಾರೆ. ಈಗಿನ ಕಥೆ ಬೇರೆ. ಈಗೆಲ್ಲಾ ಲೈಟ್ಸ್ ಇವೆ. ಆದ್ರೆ ತುಂಬಾ ಹಳೆಯ ಕಾಲದಲ್ಲಿ ದೀಪಗಳಿಂದ ಅಷ್ಟು ಪ್ರಕಾಶಮಾನ ಬೆಳಕು ಸಿಗುತ್ತಿರಲಿಲ್ಲ..
ಈ ರೂಡಿ ಆಗಿನಿಂದಲೇ ಇದ್ದು, ಈಗ ಸಂಪ್ರದಾಯಮಾಗಿದೆ ಅಷ್ಟೇ..
ಮತ್ತೆ ಆಗೆಲ್ಲಾ ಗ್ರಾನೈಟ್ಸ್ ಆಗಲಿ, ಟೈಲ್ಸ್, ಮಾರ್ಬಲ್ಸ್, ಸಿಮೆಂಟ್ ನೆಲಗಳು ಇರುತ್ತಿರಲಿಲ್ಲ. ಬಹುತೇಕ ಮಣ್ಣೆನ ಮನೆಗಳೇ ಇರುತ್ತಿದ್ದ ಕಾರಣ ರಾತ್ರಿ ವೇಳೆ ಕತ್ತಲಲ್ಲಿ ಕಸ ಗುಡಿಸೋವಾಗ, ಇಲಿಗಳು, ಹಾವುಗಳು ವಿಷಕಾರಿ ಜಂತುಗಳು ಕಚ್ಚಬಹುದಾದ ಭೀತಿಯೂ ಇತ್ತು. ಹೀಗಾಗಿ ಮನೆಯ ಅಂಗಳ ಅಥವ ಮನೆಯೊಳಗೆ ಕತ್ತಲಾದ ಬಳಿಕ ಕಸ ಗುಡಿಸಬಾರದು ಎಂದು ಹೇಳಲಾರಂಭಿಸಿದರು.








