Dinesh Karthik : ಅವರಿಬ್ಬರು ನಿಜವಾಗ್ಲೂ ಗ್ರೇಟ್ ಎಂದ ಡಿಕೆ
ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಟೀಂ ಇಂಡಿಯಾದ ಮ್ಯಾಚ್ ಫಿನಿಷರ್ ದಿನೇಶ್ ಕಾರ್ತಿಕ್ ಪ್ರಶಂಸೆಗಳ ಸುರಿಮಳೆಗೈಯುತ್ತಿದ್ದಾರೆ.
ಈ ಬಗ್ಗೆ ಮಾತನಾಡುತ್ತಾ ಡಿಕೆ ಕೃತಜ್ಞತಾ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ವಿಫಲವಾದ್ರೂ, ಸಫಲವಾದ್ರೂ ಯಾವುದೇ ಬೇರೆ ಭಾವ ತೋರದೇ ನನಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ ಎಂದು ದಿನೇಶ್ ಕಾರ್ತಿಕ್ ಕೊಂಡಾಡಿದ್ದಾರೆ.
ಅಲ್ಲದೇ ಇಂಡಿಯನ್ ಪ್ರಿಮಿಯರ್ ಲೀಗ್ 2022ರಲ್ಲಿ ಅದ್ಭುತ ಪ್ರದರ್ಶನ ನೀಡಿದ 37ರ ದಿನೇಶ್ ಕಾರ್ತಿಕ್, ತವರಿನಲ್ಲಿ ನಡೆದ ದಕ್ಷಿಣಾಫ್ರಿಕಾ ವಿರುದ್ಧದ ಸರಣಿ ಮೂಲಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದರು.
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಸರಣಿಯಲ್ಲೂ ದಿನೇಶ್ ಕಾರ್ತಿಕ್ ಮಿಂಚು ಹರಿಸುತ್ತಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ 19 ಎಸೆತಗಳನ್ನು ಎದುರಿಸಿದ ಡಿಕೆ ನಾಲ್ಕು ಬೌಂಡರಿ, ಎರಡು ಸಿಕ್ಸರ್ ಗಳ ಸಹಾಯದೊಂದಿಗೆ 41 ರನ್ ಗಳಿಸಿದ್ರು.
ಆ ಮೂಲಕ ಟೀಂ ಇಂಡಿಯಾ 190 ರನ್ ಗಳ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೇ ಮ್ಯಾನ್ ಆಫ್ ದಿ ಮ್ಯಾಚ್ ಕೂಡ ಪಡೆದುಕೊಂಡರು.

ಈ ಹಿನ್ನೆಲೆಯಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ಚಿಟ್ ಚಾಟ್ ಮಾಡಿರುವ ದಿನೇಶ್ ಕಾರ್ತಿಕ್, ಈ ಹಿಂದಿನ ತಂಡಗಳಿಗೆ ಹೋಲಿಕೆ ಮಾಡಿದ್ರೆ ಈಗಿರುವ ತಂಡ ಹೊಸದಾಗಿದೆ.
ನಾನು ಈಗ ಪ್ರತಿ ಕ್ಷಣವನ್ನು ಆಸ್ವಾದಿಸುತ್ತಿದ್ದೇನೆ. ಮುಖ್ಯವಾಗಿ ಹೆಡ್ ಕೋಚ್, ಕ್ಯಾಪ್ಟನ್ ವ್ಯವಹಾರಿಸುವ ಶೈಲಿ. ಈ ಕ್ರಿಕೆಡ್ ಎಲ್ಲವೂ ಅವರಿಬ್ಬರಿಗೆ ಸೇರಬೇಕು.
ಆಟಗಾರರು ವಿಫಲವಾದ್ರೂ ಅವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಈ ಹಿಂದೆ ಆಗಿರಲಿಲ್ಲ.
ಈಗ ನಾನು ಚೆನ್ನಾಗಿ ಆಡಿದ್ರೂ ಆಡದೇ ಇದ್ದರೂ ನನ್ನನ್ನು ಟ್ರೀಟ್ ಮಾಡುವ ವಿಧಾನ ಒಂದೇ ರೀತಿ ಇದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಇದೇ ವೇಳೆ ಮುಂದಿನ ವಿಶ್ವಕಪ್ ತನ್ನ ಗುರಿ ಎಂದರು.








