Commercial LPG cylinder | ಅಡುಗೆ ಸಿಲಿಂಡರ್ ಬೆಲೆ ಕಡಿತ
ವಾಣಿಜ್ಯ ಬಳಿಕೆ ಅಡುಗೆ ಸಿಲಿಂಡರ್ ಬೆಲೆ ಕಡಿತ
ಸಿಲಿಂಡರ್ ಬೆಲೆಯಲ್ಲಿ 36 ರೂಪಾಯಿ ಕಡಿತ
ಬೆಂಗಳೂರಿನಲ್ಲಿ ಸಿಲಿಂಡರ್ ಬೆಲೆ 2,063.50 ರೂ
ಮೌಲ್ಯವರ್ಧಿತ ತೆರಿಗೆಯಲ್ಲಿ ವ್ಯತ್ಯಯ
ಬೆಂಗಳೂರು : ಬೆಲೆ ಏರಿಕೆಯಿಂದ ಬೇಸತ್ತಿರುವ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದ್ದು, ವಾಣಿಜ್ಯ ಬಳಕೆ ಅಡುಗೆ ಸಿಲಿಂಡರ್ ಬೆಲೆ ಕಡಿತವಾಗಿದೆ.
ಕೇಂದ್ರ ಪೆಟ್ರೋಲಿಯಂ ಇಲಾಖೆಯ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಇಂದಿನಿಂದ ವಾಣಿಜ್ಯ ಬಳಕೆಯ 19ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 36 ರೂಪಾಯಿ ಕಡಿತಗೊಂಡಿದೆ.

ಈ ಬೆಲೆ ಪರಿಷ್ಕರಣೆಯೊಂದಿಗೆ ಸದ್ಯ ಬೆಂಗಳೂರಿನ್ಲಲಿ ಸಿಲಿಂಡರ್ ಬೆಲೆ 2,063.50 ರೂಪಾಯಿ ಇದೆ. ಈ ಹಿಂದೆ 2,100 ರೂಪಾಯಿ ಆಗಿತ್ತು.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು 1,976 ರೂಪಾಯಿ, ಕೊಲ್ಕತ್ತಾದಲ್ಲಿ 2,095 ರೂಪಾಯಿ, ಮುಂಬೈನಲ್ಲಿ 1936.50 ರುಪಾಯಿ ಆಗಿದೆ.
ಈ ಬೆಲೆ ಕಡಿತದೊಂದಿಗೆ ರೆಸ್ಟೋರೆಂಡ್, ಹೋಟೆಲ್ ಮಾಲೀಕರಿಗೆ ಅನುಕೂಲವಾಗಲಿದೆ.
ಆದ್ರೆ ಗೃಹಬಳಕೆ ಸಿಲಿಂಡರ್ ಬೆಲೆ ಕಡಿತದ ಬಗ್ಗೆ ಕೇಂದ್ರ ಸರ್ಕಾರ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.








