IND VS PAK : ಧೋನಿ ದಾಖಲೆ ಮುರಿದ ಹರ್ಮನ್ ಪ್ರೀತ್ ಕೌರ್
ಕಾಮನ್ ವೆಲ್ತ್ ಗೇಮ್ಸ್ 2022 ರ ಮಹಿಳಾ ಕ್ರಿಕೆಟ್ ಭಾಗವಾಗಿ ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ಹಾರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ಎಂಟು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈ ಗೆಲುವಿನೊಂದಿಗೆ ಹರ್ಮನ್ ಚುಟುಕು ಕ್ರಿಕೆಟ್ ನಲ್ಲಿ ಅತ್ಯಧಿಕ ಗೆಲುವುಗಳನ್ನು ಸಾಧಿಸಿದ ಭಾರತದ ಕ್ಯಾಪ್ಟನ್ ಆದರು. ಹರ್ಮನ್ ಪ್ರಿತ್ ಕೌರ್ ಟೀಂ ಇಂಡಿಯಾಗೆ ಟಿ 20 ಕ್ರಿಕೆಟ್ ಮಾದರಿಯಲ್ಲಿ 42 ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಈ ಮ್ಯಾಚ್ ಗೂ ಮುನ್ನಾ ಟಿ 20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಪರ ಅತ್ಯಂತ ಯಶಸ್ವಿ ನಾಯಕರಾಗಿ 41 ಗೆಲುವುಗಳೊಂದಿಗೆ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಮೊದಲ ಸ್ಥಾನದಲ್ಲಿದ್ದರು.
ಆದ್ರೆ ಇದೀಗ ಹರ್ಮನ್ ಪ್ರೀತ್ ಕೌರ್, ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದು ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಅಂದಹಾಗೆ ಈ ಪಟ್ಟಿಯಲ್ಲಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ 30 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ನಾಯಕ ರೋಹಿತ್ ಶರ್ಮಾ 27 ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಈ ಪಂದ್ಯದಲ್ಲಿ ಗೆಲುವು ಕಾಣುವ ಮೂಲಕ ಟೀಂ ಇಂಡಿಯಾ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ.
ಉಭಯ ತಂಡಗಳ ನಡುವಿನ ಟಿ 20 ಮ್ಯಾಚ್ ನಲ್ಲಿ ಎಸೆತಗಳ ವಿಚಾರದಲ್ಲಿ ಟೀಂ ಇಂಡಿಯಾ ಅತಿ ದೊಡ್ಡ ಗೆಲುವು ಕಂಡಿದೆ.
ಇದಕ್ಕೂ ಮೊದಲು 2018ರಲ್ಲಿ 23 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ಈ ಪಂದ್ಯದಲ್ಲಿ ಆ ದಾಖಲೆಯನ್ನು ಬ್ರೇಕ್ ಮಾಡಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಮಳೆಯ ಕಾರಣವಾಗಿ ಪಂದ್ಯವನ್ನು 18 ಓವರ್ ಗಳಿಗೆ ಸೀಮಿತ ಮಾಡಲಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ ತಂಡ 99 ರನ್ ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನ ಬೆನ್ನಟ್ಟಿದ ಟೀಂ ಇಂಡಿಯಾಗೆ ಉತ್ತಮ ಆರಂಭ ದೊರೆಯಿತು.
ಭಾರತದ ಓಪನರ್ ಸ್ಮೃತಿ ಮಂಧಾನ 42 ಎಸೆತಗಳಲ್ಲಿ ಎಂಟು ಬೌಂಡರಿ, ಮೂರು ಸಿಕ್ಸರ್ ಗಳ ನೆರವಿನಿಂದ 63 ರನ್ ಗಳಿಸಿದ್ರು.
ಭಾರತ ಕ್ರಿಕೆಟ್ ತಂಡ 38 ಎಸೆತಗಳು ಬಾಕಿ ಇರುವಂತೆ ಪಾಕಿಸ್ತಾನದ ವಿರುದ್ಧ ಎಂಟು ವಿಕೆಟ್ ಗಳಿಂದ ಗೆಲುವು ಸಾಧಿಸಿತು.