Nirmala Mishra | ಖ್ಯಾತ ಹಿರಿಯ ಗಾಯಕಿ ವಿಧಿವಶ
ಬೆಂಗಾಲಿ ಗಾಯಕಿ ನಿರ್ಮಲಾ ಮಿಶ್ರಾ ಇನ್ನಿಲ್ಲ
ಹೃದಯಾಘಾತದಿಂದ ನಿರ್ಮಲಾ ಮಿಶ್ರಾ ವಿಧಿವಶ
1938 ರಲ್ಲಿ ಜನಿಸಿದ್ದ ನಿರ್ಮಲಾ ಮಿಶ್ರಾ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ
ಕೋಲ್ಕತ್ತಾ : ಖ್ಯಾತ ಬೆಂಗಾಲಿ ಮತ್ತು ಒಡಿಯಾ ಗಾಯಕಿ ನಿರ್ಮಲಾ ಮಿಶ್ರಾ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಕೆಲವು ಸಮಯದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಆದ್ರೆ ಭಾನುವಾರ ಮಧ್ಯರಾತ್ರಿ ನಿರ್ಮಲಾ ಮಿಶ್ರಾ ಅವರಿಗೆ ತೀವ್ರ ಹೃದಯಾಘಾತವಾಗಿದೆ.
ಕೂಡಲೇ ಅವರನ್ನ ಸಮೀಪದ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಹೋಗಲಾಯಿತು. ಆದ್ರೆ ಅಲ್ಲಿಗಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ.

1938 ರಲ್ಲಿ ಜನಿಸಿದ್ದ ನಿರ್ಮಲಾ ಮಿಶ್ರಾ ಅವರು, ಎಮಾನ್ ಏಕ್ತಾ ಜಿನುಕ್, ಬೋಲೋ ತೊ ಅರ್ಷಿ ಮತ್ತು ಈ ಬಂಗ್ಲಾರ್ ಮತಿ ತೆ ಹಾಡುಗಳ ಮೂಲಕ ಮನೆ ಮಾತಾಗಿದ್ದರು.
ಅವರು ಸಂಗೀತ ಸುಧಾಕರ್ ಬಾಲಕೃಷ್ಣ ದಾಸ್ ಪ್ರಶಸ್ತಿಗೆ ಭಾಜನರಾಗಿದ್ದರು.
ಸದ್ಯ ನಿರ್ಮಲಾ ಮಿಶ್ರಾ ಅವರ ಅಗಲಿಕೆಗೆ ವೆಸ್ಟ್ ಬೆಂಗಾಲ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.








