Nagara Panchami | ಕೋಳಿ ಕುಯ್ದು ಹುತ್ತಕ್ಕೆ ರಕ್ತ – ಹೀಗೊಂದು ವಿಶಿಷ್ಟ ಆಚರಣೆ!
ನಾಗರ ಪಂಚಮಿ ಹಬ್ಬ ಹಿನ್ನೆಲೆ
ಕೂಡ್ಲಿಗಿಯ ಬತ್ತನಹಳ್ಳಿಯಲ್ಲಿ ಘಟನೆ
ಕೊರಮ ಸಮುದಾಯದರಿಂದ ಆಚರಣೆ
ವಿಜಯನಗರ : ಶುಕ್ಲಪಕ್ಷದ ಪಂಚಮಿಯಂದು ನಾಗರ ಪಂಚಮಿಯಂದು ಹಲವು ಭಾಗದಲ್ಲಿ ಶ್ರದ್ಧಾಭಕ್ತಿಯಿಂದ ನಾಗ ದೇವತೆಯನ್ನು ಪೂಜಿಸುತ್ತಾರೆ.
ದೇವಸ್ಥಾನ ಹಾಗೂ ಹುತ್ತಗಳ ಬಳಿ ಭಕ್ತರು ಹಾಲು, ಬೆಳ್ಳಿ ಆಭರಣ ಅರ್ಪಿಸುತ್ತಾರೆ. ಆದ್ರೆ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿ ಕೋಳಿ ಕುಯ್ಡು ಹುತ್ತಕ್ಕೆ ರಕ್ತವನ್ನು ಬಿಡುತ್ತಾರೆ.

ಈ ಗ್ರಾಮದಲ್ಲಿ ಕೊರಚ ಮತ್ತು ಕೊರಮ ಸಮುದಾಯದವರು ನಾಗರ ಪಂಚಮಿಯನ್ನು ಈ ರೀತಿಯಾಗಿ ಆಚರಣೆ ಮಾಡುತ್ತಾರೆ. ಇದಕ್ಕೆ ಕಾರಣವೂ ಇದ್ದು, ಈ ಹಿಂದೆ ಇವರು ಕಾಡಿನಲ್ಲಿ ವಾಸ ಮಾಡುತ್ತಿದ್ದರು.
ಆಗ ಹಾವುಗಳ ಕಡಿತಕ್ಕೆ ಒಳಗಾಗಿ ಸಾಯುತ್ತಿದ್ದರು. ಆಗ ಯಾರೋ ಹಿರಿಯರ ಸಲಹೆಯಂತೆ ನಾಗರ ಪಂಚಮಿಯಂದು ಕೋಳಿ ಬಲಿ ಕೊಟ್ಟು, ರಕ್ತವನ್ನು ಹಾಲಿನಂತೆ ಹುತ್ತಕ್ಕೆ ಎರೆಯುವಂತೆ ಹೇಳಿದ್ದರಂತೆ. ಅದರಂತೆ ಅಂದಿನಿಂದ ಇಂದಿನವರೆಗೂ ಅದೇ ಆಚರಣೆವನ್ನು ಮಾಡಿಕೊಂಡು ಬರುತ್ತಿದ್ದಾರೆ.








