ಪ್ರಧಾನಿ ಮೋದಿ ಬಳಿ ಇದೆ 2.23 ಕೋಟಿ ಆಸ್ತಿ: ಕಳೆದ ವರ್ಷಕ್ಕಿಂತ 26.13% ಹೆಚ್ಚಳ..
ಪ್ರಧಾನಿ ನರೇಂದ್ರ ಮೋದಿ ಅವರು 2.23 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಈ ಆಸ್ತಿಗಳಲ್ಲಿ ಹೆಚ್ಚಿನವು ಬ್ಯಾಂಕ್ ಠೇವಣಿಗಳಾಗಿವೆ. ಗುಜರಾತ್ನ ಗಾಂಧಿನಗರದಲ್ಲಿರುವ ತಮ್ಮ ಜಮೀನಿನ ಭಾಗವನ್ನು ದಾನ ಮಾಡಿರುವುದರಿಂದ ಪ್ರಧಾನಿ ಬಳಿ ಈಗ ಯಾವುದೇ ಸ್ಥಿರಾಸ್ತಿ ಇಲ್ಲ. ಈ ಜಮೀನಿನ ಬೆಲೆ 1.1 ಕೋಟಿ ರೂ.
ಪಿಎಂಒ ವೆಬ್ಸೈಟ್ನಲ್ಲಿ ಪ್ರಧಾನಿಯವರ ಆಸ್ತಿ ಘೋಷಣೆ ಮಾಡಲಾಗಿದೆ. ಮಾಹಿತಿ ಪ್ರಕಾರ 2022ರ ಮಾರ್ಚ್ 31ಕ್ಕೆ ಅವರ ಒಟ್ಟು ಆಸ್ತಿ 2 ಕೋಟಿ 23 ಲಕ್ಷ 82 ಸಾವಿರದ 504 ರೂ. ಇದೇ ವೇಳೆ ಮೋದಿಯವರ ಚರ ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದರೆ 26.13 ಲಕ್ಷ ರೂ. ಏರಿಕೆಯಾಗಿದೆ.
ಪ್ರಧಾನಿಯವರು ಯಾವುದೇ ಬಾಂಡ್ಗಳು, ಷೇರುಗಳು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿಲ್ಲ, ಸ್ವಂತ ವಾಹನವನ್ನೂ ಸಹ ಹೊಂದಿಲ್ಲ. ಪ್ರಧಾನಿ ಬಳಿ 4 ಚಿನ್ನದ ಉಂಗುರಗಳಿದ್ದು, ಇದರ ಬೆಲೆ 1.73 ಲಕ್ಷ ರೂ. ಮಾರ್ಚ್ 31, 2021 ರಂತೆ, ಪ್ರಧಾನ ಮಂತ್ರಿ 1.1 ಕೋಟಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.
1.89 ಲಕ್ಷ ಜೀವ ವಿಮೆ
ಮಾರ್ಚ್ 31, 2022 ರಂತೆ, ಪ್ರಧಾನ ಮಂತ್ರಿಯ ಬಳಿ ಒಟ್ಟು 35,250 ರೂ ನಗದು ಹಣವಿದೆ. ಇದೇ ವೇಳೆ ಅವರ ಹೆಸರಿನಲ್ಲಿ 9 ಲಕ್ಷ 5 ಸಾವಿರದ 105 ರೂಪಾಯಿ ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರವನ್ನು ಅಂಚೆ ಕಚೇರಿಯಲ್ಲಿ ಜಮಾ ಮಾಡಲಾಗಿದೆ. ಮೋದಿ ಕೂಡ 1 ಲಕ್ಷದ 89 ಸಾವಿರದ 305 ರೂಪಾಯಿ ಜೀವ ವಿಮೆ ಹೊಂದಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ, ಎಲ್ಲಾ 29 ಕ್ಯಾಬಿನೆಟ್ ಸಚಿವರು ತಮ್ಮ ಮತ್ತು ಅವರ ಅವಲಂಬಿತರ ಆಸ್ತಿಯನ್ನು ಘೋಷಿಸಿದ್ದರು.








