ADVERTISEMENT
Wednesday, September 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Raksha Bandhana : ರಕ್ಷಾ ಬಂಧನ 11-08-2022 ಗುರುವಾರ ಶುಭಾ ಮುಹೂರ್ತ, ಮಂತ್ರದ ಅರ್ಥ ಮತ್ತು ಮಹತ್ವ..

ಶ್ರಾವಣ ಮಾಸದ ಪೂರ್ಣಿಮಾ ತಿಥಿಯಂದು ರಕ್ಷಾ ಬಂಧನ ಆಚರಿಸಲು ಶಾಸ್ತ್ರ ಹೇಳಿದೆ. ಇದರ ಬಗ್ಗೆ ಭವಿಷ್ಯಪುರಾಣದಲ್ಲಿ, ಬ್ರಹ್ಮವೈವರ್ತದಲ್ಲಿ ಹೇಳಲಾಗಿದೆ. ಹಾಗೆಯೇ ಧರ್ಮಸಿಂಧು, ನಿರ್ಣಯಸಿಂಧು, ಹೇಮಾದ್ರಿ, ಮದನರತ್ನ ಇತ್ಯಾದಿ ಧರ್ಮಶಾಸ್ತ್ರ ಗ್ರಂಥಗಳಲ್ಲಿ ವಿವರಿಸಲಾಗಿದೆ.

Namratha Rao by Namratha Rao
August 11, 2022
in Astrology, Newsbeat, ಜ್ಯೋತಿಷ್ಯ
Raksha bandhana

Raksha Bandhana

Share on FacebookShare on TwitterShare on WhatsappShare on Telegram

Raksha Bandhana : ರಕ್ಷಾ ಬಂಧನ 11-08-2022 ಗುರುವಾರ ಶುಭಾ ಮುಹೂರ್ತ, ಮಂತ್ರದ ಅರ್ಥ ಮತ್ತು ಮಹತ್ವ..

ಶ್ರಾವಣ ಮಾಸದ ಪೂರ್ಣಿಮಾ ತಿಥಿಯಂದು ರಕ್ಷಾ ಬಂಧನ ಆಚರಿಸಲು ಶಾಸ್ತ್ರ ಹೇಳಿದೆ. ಇದರ ಬಗ್ಗೆ ಭವಿಷ್ಯಪುರಾಣದಲ್ಲಿ, ಬ್ರಹ್ಮವೈವರ್ತದಲ್ಲಿ ಹೇಳಲಾಗಿದೆ. ಹಾಗೆಯೇ ಧರ್ಮಸಿಂಧು, ನಿರ್ಣಯಸಿಂಧು, ಹೇಮಾದ್ರಿ, ಮದನರತ್ನ ಇತ್ಯಾದಿ ಧರ್ಮಶಾಸ್ತ್ರ ಗ್ರಂಥಗಳಲ್ಲಿ ವಿವರಿಸಲಾಗಿದೆ.

Related posts

hebbal-first-grade-college-new-building-10-crore-byrathi-suresh

10 ಕೋ. ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ –  ಕಾಮಗಾರಿ ಶಿಲಾನ್ಯಾಸ ನೆರವೇರಿಸಿದ ಸಾರಿಗೆ ಸಚಿವ ಬೈರತಿ ಸುರೇಶ್

September 1, 2026
mysuru-drought-drinking-water-fodder-cattle-g-parameshwara |

ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ

September 1, 2026

ಈ ಹಬ್ಬದ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ
ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

ರಕ್ಷಾಬಂಧನ ಶುಭಾ ಮುಹೂರ್ತ

ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನಾಂಕವು 2022 ರ ಆಗಸ್ಟ್ 11 ರಂದು ಬೆಳಿಗ್ಗೆ 10.38 ಕ್ಕೆ ಪ್ರಾರಂಭವಾಗುತ್ತದೆ, ಇದು ಆಗಸ್ಟ್ 12 ರಂದು ಬೆಳಿಗ್ಗೆ 07.05 ರವರೆಗೆ ಇರುತ್ತದೆ. ಎಲ್ಲಾ ಉಪವಾಸ ಹಬ್ಬಗಳನ್ನು ಉದಯತಿಥಿಯಂದು ಆಚರಿಸಲಾಗುತ್ತದೆ, ಆದ್ದರಿಂದ ರಕ್ಷಾ ಬಂಧನದ ರಾಖಿ ಕಟ್ಟುವ ಶುಭ ಮುಹೂರ್ತವು ಆಗಸ್ಟ್ 11 ರಂದು ಬೆಳಿಗ್ಗೆ 09.28 ರಿಂದ ರಾತ್ರಿ 09.14 ರವರೆಗೆ ಇರುತ್ತದೆ. ರವಿಯೋಗವು ಬೆಳಿಗ್ಗೆ 05:48 ರಿಂದ 06:53 ರವರೆಗೆ ಪ್ರಾರಂಭವಾಗಲಿದೆ. ಅಮೃತ ಕಾಲವು ಸಂಜೆ 06:55 ರಿಂದ 08:20 ರವರೆಗೆ ಇರುತ್ತದೆ.

ರಕ್ಷಾ ಬಂಧನ ಆಚರಣೆಯ ಹಿಂದಿನ ಒಂದು ಕಥೆ :-
ಒಮ್ಮೆ ರಾಕ್ಷಸರು ಹಾಗೂ ದೇವತೆಗಳ ನಡುವೆ ಯುದ್ಧವಾಗುತ್ತಿರುತ್ತದೆ. ಯುದ್ಧದ ಸಮಯದಲ್ಲಿ ದೇವತೆಗಳು ಸೋಲುವ ಘಟ್ಟ ತಲುಪುತ್ತಾರೆ. ಸೋಲುವ ಭೀತಿಯಲ್ಲಿದ್ದ ಇಂದ್ರ ದೇವನು ಬೃಹಸ್ಪತಿಯ ಮೊರೆ ಹೋಗುತ್ತಾನೆ. ಇಂದ್ರ ಮೊರೆ ಕೇಳಿದ ಬೃಹಸ್ಪತಿ ದೇವನು ಇಂದ್ರನ ಪತ್ನಿ ಇಂದ್ರಾಣಿಗೆ ಸಲಹೆ ನೀಡುತ್ತಾನೆ. ಬೃಹಸ್ಪತಿಯ ಸಲಹೆಯಂತೆ ಇಂದ್ರಾಣಿ ರೇಷ್ಮೆಯ ದಾರವನ್ನು ರಕ್ಷಣೆ ಹಾಗೂ ಯುದ್ಧದಲ್ಲಿ ಗೆದ್ದು ಬರಲು ಜಯದ ಸಂಕೇತವಾಗಿ ರೇಷ್ಮೆಯ ದಾರವೊಂದನ್ನು ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರ ಯುದ್ಧದಲ್ಲಿ ಜಯ ಸಾಧಿಸುತ್ತಾನೆ.

ಪೌರಾಣಿಕ ಕಥೆ : ಕೃಷ್ಣ ಮತ್ತು ದ್ರೌಪದಿ ಸೋದರತೆಯ ಸಂಬಂಧದ ಸಂಕೇತ ಈ ರಕ್ಷಾ ಬಂಧನ ಎಂದು ಹೇಳಲಾಗುತ್ತದೆ. ಶಿಶುಪಾಲನ ನೂರು ತಪ್ಪುಗಳು ಕ್ಷಮಿಸಿದ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಲು ತನ್ನ ಶ್ರೀ ಚಕ್ರವನ್ನು ಕಳುಹಿಸುತ್ತಾನೆ. ಶ್ರೀಚಕ್ರ ಕೈಯಿಂದ ಹೋಗುವ ವೇಳೆ ಶ್ರೀಕೃಷ್ಣನ ಬೆರಳು ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ. ಇದನ್ನು ಕಂಡ ದ್ರೌಪದಿ ಹಿಂದುಮುಂದು ಯೋಚಿಸದೆ ತಾನುಟ್ಟಿದ್ದ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ಇದನ್ನು ಕಂಡ ಶ್ರೀಕೃಷ್ಣ ತನಗೆ ಏನು ಬೇಕು ಎಂದು ಕೇಳಿಕೋ ಎಂದು ಹೇಳುತ್ತಾನೆ. ಈ ವೇಳೆ ದ್ರೌಪದಿ ಜೀವನ ಇರುವವರೆಗೂ ಒಳ್ಳೆಯ ಸಹೋದರಿಯಾಗಿತ್ತೇನೆ ಎಂದು ಹೇಳುತ್ತಾಳೆ. ದ್ರೌಪದಿಯ ಈ ಮಾತುಗಳನ್ನು ಕೇಳಿದ ಶ್ರೀಕೃಷ್ಣನು ದ್ರೌಪದಿಯ ಸಹೋದರನಾಗಿ ನಿಂತು ಸಂಕಷ್ಟದ ಸಮಯದಲ್ಲಿ ಕಾಪಾಡುವುದಾಗಿ ಹೇಳುತ್ತಾನೆ. ಇದರಂತೆ ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಸಹೋದರನಾಗಿ ನಿಂತ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಸೀರೆಯನ್ನು ದಯಪಾಲಿಸಿ ಆಕೆಯನ್ನು ರಕ್ಷಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಉತ್ತರ ಭಾರತದಲ್ಲಿ ವಿಶೇಷವಾಗಿ ರಕ್ಷಾಬಂಧನವನ್ನು ಹಬ್ಬವಾಗಿ ಆಚರಿಸಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ಎಲ್ಲರಿಗೂ ರಕ್ಷಾಸೂತ್ರವನ್ನು ಕಟ್ಟುವ ಪದ್ಧತಿ ಇದ್ದಿತು. ಹೆಂಡತಿಯು ಗಂಡನಿಗೆ, ಗುರುಗಳು ಶಿಷ್ಯರಿಗೆ, ಪುರೋಹಿತರು ರಾಜರಿಗೆ, ಅಜ್ಜಿ-ತಾಯಂದಿರು ಮಕ್ಕಳಿಗೆ-ಮೊಮ್ಮಕ್ಕಳಿಗೆ ಇತ್ಯಾದಿ. ಇಷ್ಟೇ ಏಕೆ, ಮನೆಯ ಗೋಮಾತೆಗೂ ಕೂಡ ರಕ್ಷಾ ಕಟ್ಟಲಾಗುತ್ತಿತ್ತು! ಯಾರ ರಕ್ಷಣೆಯನ್ನು ನಾವು ಬಯಸುವೆವೋ ಅವರಿಗೆ ಮಂತ್ರಪೂರಿತವಾದ ರಕ್ಷೆಯನ್ನು ಕಟ್ಟುವುದು. ಕಟ್ಟಿಸಿಕೊಳ್ಳುವವರ ರಕ್ಷಣೆಯೇ ವಿನಹ ಕಟ್ಟುವವರ ರಕ್ಷಣೆಯ ಉದ್ದೇಶ ಅಲ್ಲ! ಇದೆ ರಕ್ಷಾ ಬಂಧನ. ಪುರಾಣಗಳಲ್ಲಿ. ಬಲಿ ಚಕ್ರವರ್ತಿಗೆ ಆತನ ರಾಣಿಯಾದ ವಿಂಧ್ಯಾವಳಿಯು ರಕ್ಷೆ ಕಟ್ಟಿದ್ದುಂಟು.

– ರಾಖಿ ಕಟ್ಟಲು ಸಹೋದರ ಯಾವಾಗಲೂ ಪೂರ್ವಕ್ಕೆ ಮತ್ತು ಸಹೋದರಿ ಪಶ್ಚಿಮಕ್ಕೆ ಮುಖ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ರಾಖಿಗೆ ದೇವರ ಆಶೀರ್ವಾದವೂ ಸಿಗುತ್ತದೆ.

– ರಾಖಿಯನ್ನು ಕಟ್ಟುವಾಗ, ಸಹೋದರರು ತಮ್ಮ ತಲೆಯ ಮೇಲೆ ಕರವಸ್ತ್ರ ಅಥವಾ ಯಾವುದೇ ಶುದ್ಧವಾದ ಬಟ್ಟೆಯನ್ನು ಹಾಕಿಕೊಳ್ಳಬೇಕು.

– ಸಹೋದರಿಯು ತನ್ನ ಸಹೋದರನ ಬಲಗೈಯ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟಿ ನಂತರ ಶ್ರೀಗಂಧದ ತಿಲಕ ಮತ್ತು ಕುಂಕುಮವನ್ನು ಹಚ್ಚಬೇಕು.

– ತಿಲಕವನ್ನು ಹಚ್ಚಿದ ನಂತರ, ಸಹೋದರಿಯು ಸಹೋದರನ ತಲೆಯ ಮೇಲೆ ಅಕ್ಷತೆಯನ್ನು, ಸಹೋದರನು ಸಹೋದರಿಯ ತಲೆಯ ಮೇಲೆ ಅಕ್ಷತೆಯನ್ನು ಹಾಕಬೇಕು.

– ಇದಾದ ನಂತರ, ದೀಪದಿಂದ ಆರತಿಯನ್ನು ಮಾಡಬೇಕು. ಸಹೋದರಿ ಮತ್ತು ಸಹೋದರ ಪರಸ್ಪರ ಸಿಹಿ ತಿನ್ನಿಸುವ ಮೂಲಕ ತಮ್ಮ ಬಾಯಿಯನ್ನು ಸಿಹಿ ಮಾಡಿಕೊಳ್ಳಬೇಕು.

– ಸಹೋದರನು ಬಟ್ಟೆ, ಆಭರಣ, ಹಣ ಅಥವಾ ಇನ್ನಾವುದೇ ಉಡುಗೊರೆಯನ್ನು ನೀಡುವ ಮೂಲಕ ಸಹೋದರಿಯ ಸಂತೋಷದ ಜೀವನವನ್ನು ಹಾರೈಸಬೇಕು.

ರಕ್ಷಾ ಸೂತ್ರ ಕಟ್ಟುವಾಗ ಹೇಳುವ ಮಂತ್ರ ಹೀಗಿದೆ –

येन बद्धो बलि राजा दानवेन्द्रो महाबल: |

तेन त्वां प्रतिबध्नामी रक्षे माचल माचल ||

”ಯೇನ್‌ ಬದ್ಧೋ ಬಲಿ ರಾಜಾ, ದಾನವೇಂದ್ರೋ ಮಹಾಬಲಃ ತೇನ್‌ ತ್ವಾಂ ಪ್ರತಿಬದ್ಧನಾಮಿ ರಕ್ಷೇ ಮಾಚಲ ಮಾಚಲಃ”
ಅರ್ಥ – ಯಾವುದರಿಂದ ದಾನವೇಂದ್ರನಾದ ಮಹಾಬಲಿಯು ಬದ್ಧನಾಗಿದ್ದನೋ, ಅದರಿಂದಲೇ ನಿನ್ನನ್ನು ಬಂಧನ ಮಾಡುತ್ತೇನೆ. ಹೇ ರಕ್ಷೆ, ನೀನು ಅಚಲವಾಗಿರು, ಸ್ಥಿರವಾಗಿರು.

ಸಿಂಧೂರ, ಕುಂಕುಮ ಅಥವಾ ಶ್ರೀಗಂಧವನ್ನು ಹಚ್ಚುವಾಗ ಈ ಮಂತ್ರವನ್ನು ಪಠಿಸಿ:

”ಸಿಂಧೂರಂ ಸೌಭಾಗ್ಯ ವರ್ಧನಂ, ಪವಿತ್ರಂ ಪಾಪ ನಾಶನಂ|
ಆಪದಂ ಹರತೇ ನಿತ್ಯಂ, ಲಕ್ಷ್ಮಿಸ್ತಿಷ್ಠತಿ ಸರ್ವದಾ||”

ಈ ರೀತಿ ರಕ್ಷಾ-ಸೂತ್ರವನ್ನು ಕಟ್ಟಿಸಿಕೊಂಡವರು ವರ್ಷವಿಡೀ ಸುರಕ್ಷಿತರಾಗಿ, ಸುಖಿಯಾಗಿ, ಯಶಸ್ವಿಗಳಾಗಿ ಇರುತ್ತಾರೆ.

ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ
ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.

ರಕ್ಷಾಬಂಧನ ಇದು ಮಧುರವಾದ ಭಾವಾನುಬಂಧ,
ಸಹೋದರ ಸಹೋದರಿಯರ ನವೀರಾದ ಭಾವನೆಗಳನ್ನು ರಕ್ಷಾಬಂಧನದ ಮೂಲಕ ಗಟ್ಟಿಗೊಳಿಸುವ ದಿನ. “ಸಹೋದರತ್ವದ ಪ್ರತೀಕ ರಕ್ಷಾಬಂಧನ”

Tags: #astrology#saakshatvbrother and sisterRaksha bandhana
ShareTweetSendShare
Join us on:

Related Posts

hebbal-first-grade-college-new-building-10-crore-byrathi-suresh

10 ಕೋ. ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ –  ಕಾಮಗಾರಿ ಶಿಲಾನ್ಯಾಸ ನೆರವೇರಿಸಿದ ಸಾರಿಗೆ ಸಚಿವ ಬೈರತಿ ಸುರೇಶ್

by admin
September 1, 2026
0

ಬೆಂಗಳೂರು: ಹೆಬ್ಬಾಳ ವಿಧಾನಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೊಂದು ಸುಸಜ್ಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಕ್ಷೇತ್ರದ ಶಾಸಕರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್...

mysuru-drought-drinking-water-fodder-cattle-g-parameshwara |

ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ

by admin
September 1, 2026
0

ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಜಲಾಶಯಗಳಲ್ಲಿನ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಯಾವುದೇ...

mysuru-severe-drought-8-taluks-rainfall-deficit-g-parameshwara

ಮೈಸೂರಿನಲ್ಲಿ ಶೇ.55ರಷ್ಟು ಮಳೆ ಕೊರತೆ ; 8 ತಾಲೂಕುಗಳು ತೀವ್ರ ಬರ ಪೀಡಿತ ಎಂದು ಘೋಷಣೆ

by admin
September 1, 2026
0

ಮೈಸೂರು, : ಇಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಮೈಸೂರಿನ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾ...

karnataka-water-interests-legal-fight-chaluvarayaswamy-delhi-meeting |

“ರಾಜ್ಯದ ಜಲ ಹಿತಾಸಕ್ತಿ ರಕ್ಷಣೆಗೆ ರಾಜಿಯಿಲ್ಲ – ಕಾನೂನು ಹೋರಾಟ ಚುರುಕು – ಕಾನೂನು ತಂಡಕ್ಕೆ ಸಚಿವ ಚಲುವರಾಯಸ್ವಾಮಿ ಖಡಕ್ ಸೂಚನೆ”

by admin
September 1, 2026
0

"ದೆಹಲಿಯಲ್ಲಿ ಸಚಿವ ಚಲುವರಾಯಸ್ವಾಮಿ ಮೆಗಾ ಸಭೆ - ಕಾವೇರಿ, ಕೃಷ್ಣಾ, ಮಹದಾಯಿ, ಪೆನ್ನೈಯಾರ್ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ವಾದಕ್ಕೆ ರಣತಂತ್ರ" "ಮೇಕೆದಾಟು DPR, ಅರಣ್ಯ ಅನುಮೋದನೆಗೆ...

charchge-barada-bjp-eega-padayatre-priyank-kharge

ಚರ್ಚೆಗೆ ಬಾರದ ಬಿಜೆಪಿ ಈಗ ಪಾದಯಾತ್ರೆ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ

by admin
September 1, 2026
0

ಕಲಬುರಗಿ - ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿ ಬಿಜೆಪಿ ಆರಂಭಿಸಿರುವ ಪಾದಯಾತ್ರೆಯ ಉದ್ದೇಶವೇನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram