Ind Vs Zim ODI Series : ಟೀಂ ಇಂಡಿಯಾಗೆ ಗಟ್ಟಿ ಪೈಪೋಟಿ
ಬಾಂಗ್ಲಾದೇಶ ತಂಡ ವಿರುದ್ಧದ ಏಕದಿನ ಸರಣಿಯಲ್ಲಿ ದಿಗ್ವಿಜಯ ಸಾಧಿಸಿರುವ ಜಿಂಬಾಬ್ವೆ ತಂಡ ಇದೀಗ ಟೀಂ ಇಂಡಿಯಾ ಸವಾಲು ಎದುರಿಸಲಿದೆ.
ಬಾಂಗ್ಲಾ ತಂಡದ ವಿರುದ್ಧ 2-1 ರ ಅಂತರದಲ್ಲಿ ಜಿಂಬಾಬ್ವೆ ತಂಡ ಏಕದಿನ ಸರಣಿ ವಶಪಡಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಜಿಂಬಾಬ್ವೆ ತಂಡದ ಹೆಡ್ ಕೋಚ್ ಡೇವಿಡ್ ಹೌನ್ ತಮ್ಮದೇಯಾದ ವಾದ ಮಂಡಿಸಿದ್ದಾರೆ.
ಭಾರತ ತಂಡದ ಜಿಂಬಾಬ್ವೆ ಪ್ರವಾಸದ ಬಗ್ಗೆ ಮಾತನಾಡಿರುವ ಡೇವಿಡ್ ಹೌನ್, ಟೀಂ ಇಂಡಿಯಾದಂತಹ ಬಲಿಷ್ಠ ತಂಡದ ವಿರುದ್ಧ ಆಡೋದಕ್ಕೆ ನಾವು ಎದುರು ನೋಡುತ್ತಿದ್ದೇವೆ.
ನಾವು ಖಂಡಿತವಾಗಿಯೂ ಗಟ್ಟಿ ಪೈಪೋಟಿಯನ್ನು ನೀಡುತ್ತೇವೆ. ಕಳೆದ ಕೆಲವು ದಿನಗಳಿಂದ ನಾವು ಉತ್ತಮ ಫಲಿತಾಂಶವನ್ನು ನೋಡುತ್ತಿದ್ದೇವೆ.
ಮುಂಬರುವ ಸರಣಿಗಳಲ್ಲಿ ಅದೇ ರೀತಿಯ ಜೋರನ್ನ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.
ನನ್ನ ಪ್ರಕಾರ ನಾವು ಗೆಲ್ಲುತ್ತೇವೆ ಎಂಬ ಗಟ್ಟಿ ನಿರ್ಧಾರದೊಂದಿಗೆ ಮೈದಾನಕ್ಕೆ ಇಳಿದರೇ ಎಲ್ಲವೂ ಸಾಧ್ಯವಾಗುತ್ತದೆ.
ನಾವು ಇಂತಹ ನಂಬಿಕೆಯೊಂದಿಗೆ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗುತ್ತಿದ್ದೇವೆ. ಅದೇ ರೀತಿಯ ವಿಶ್ವಾಸವನ್ನು ಟೀಂ ಇಂಡಿಯಾ ವಿರುದ್ಧದ ಸರಣಿಯಲ್ಲಿ ನಾವು ಮುಂದುವರೆಸುತ್ತೇವೆ ಎಂದು ಡೇವಿಡ್ ಹೇಳಿದ್ದಾರೆ.
ಆಗಸ್ಟ್ 18, 20, 22 ರಂದು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದ್ದು, ಕೆ.ಎಲ್.ರಾಹುಲ್ ಸಾರಥ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಯಲಿದೆ.