Salman Rushdie: ಅಮೆರಿಕಾದಲ್ಲಿ ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ – ಕುತ್ತಿಗೆಗೆ ಚಾಕು ಇರಿತ..
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿರುವ ಲೇಖಕ ಸಲ್ಮಾನ್ ರಶ್ದಿ ಅವರ ಸ್ಥಿತಿ ಚಿಂತಾಜನಕವಾಗಿದೆ. ದಾಳಿಯಲ್ಲಿ ರಶ್ದಿ ಅವರಿಗೆ ತೀವ್ರ ಗಾಯಗಳಾಗಿದ್ದು, ಒಂದು ಕಣ್ಣನ್ನು ಕಳೆದುಕೊಂಡಿರಬಹುದು ಎಂದು ರಶ್ದಿ ಆಪ್ತರು ತಿಳಿಸಿದ್ದಾರೆ.
ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಗುರುತನ್ನ ಪೊಲೀಸರು ಬಹಿರಂಗಪಡಿಸಿದ್ದಾರೆ. ಈತ ನ್ಯೂಜೆರ್ಸಿ ನಿವಾಸಿ ಹಾದಿ ಮಾತರ್ ಎಂದು ಹೇಳಲಾಗಿದೆ. ಆತನಿಗೀಗ ಕೇವಲ 24 ವರ್ಷ.
ನ್ಯೂಯಾರ್ಕ್ ಪೊಲೀಸರ ಪ್ರಕಾರ, ದಾಳಿಕೋರನನ್ನ ಸಲ್ಮಾನ್ ರಶ್ದಿ ಅವರ ಕಾರ್ಯಕ್ರಮದಲ್ಲಿ ಹಾಜರಿದ್ದ ಹಿಡಿದು ಬಂಧಿಸಿದ್ದಾರೆ. ಪೊಲೀಸರು ಆರೋಪಿ ದಾಳಿಕೋರನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ. ಈತ ಕಾರ್ಯಕ್ರಮದ ಪಾಸ್ ಹೊಂದಿದ್ದ ಎನ್ನಲಾಗಿದೆ.
ದಾಳಿಕೋರ, ಸಲ್ಮಾನ್ ರಶ್ದಿ ಮೇಲೇಕೆ ದಾಳಿ ಮಾಡಿದ್ದಾನೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಎಫ್ಬಿಐ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿ ತನಿಖೆ ನಡೆಸುತ್ತಿದೆ. ಸ್ಥಳದಿಂದ ಒಂದು ಬ್ಯಾಗ್ ಮತ್ತು ಕೆಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾದಿ ಮತ್ತಾರ್ ಇರಾನ್ನ ದೊಡ್ಡ ಬೆಂಬಲಿಗ ಎಂದು ಕೆಲವು ವರದಿಗಳು ಹೇಳುತ್ತಿವೆ. ಆತನ ಫೇಸ್ಬುಕ್ ಖಾತೆಯಲ್ಲಿ ಇರಾನ್ನ ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಖೊಮೇನಿ ಮತ್ತು ಪ್ರಸ್ತುತ ಸುಪ್ರೀಂ ಲೀಡರ್ ಅಯತೊಲ್ಲಾ ಖಮೇನಿ ಅವರ ಚಿತ್ರಗಳಿವೆ. 1989 ರಲ್ಲಿ, ಖೊಮೇನಿ ಅವರು ರಶ್ದಿಯವರ ವಿರುದ್ಧ ಫತ್ವಾ ಹೊರಡಿಸಿದರು, ಅವರ ಪುಸ್ತಕ ದಿ ಸೈಟಾನಿಕ್ ವರ್ಸಸ್ನ ಪ್ರಕಟಣೆಯನ್ನು ಖಂಡಿಸಿದರು.