ಹಾವಿನಿಂದ ಮಗನನ್ನು ಕಾಪಾಡಿದ ತಾಯಿ
ಮಂಡ್ಯ : ಮಹಿಳೆಯೊಬ್ಬರು ನಾಗರ ಹಾವಿನಿಂದ ಮಗನನ್ನು ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ತಾಯಿ – ಮಗ ಮನೆಯಿಂದ ಹೊರ ಬರುತ್ತಿರುತ್ತಾರೆ.
ಅದೇ ಸಂದರ್ಭದಲ್ಲಿ ಮನೆ ಮುಂಭಾಗ ಮೆಟ್ಟಿಲುಗಳ ಬಳಿ ನಾಗರ ಹಾವೊಂದು ಹೋಗುತ್ತಿರುತ್ತದೆ.
ಇದನ್ನ ತಿಳಿಯದ ಬಾಲಕ ಹಾವಿನ ಬಳಿ ಹೆಜ್ಜೆ ಇಡುತ್ತಾನೆ. ಇದರಿಂದ ಬೆದರಿದ ಹಾವು ಎಡೆಬಿಚ್ಚಿ ಬುಸ್ ಎನ್ನುತ್ತೆ.
ಆಗ ಗಾಬರಿಗೊಂಡ ಬಾಲಕ ಚೀರಾಡುತ್ತಾನೆ, ಇದನ್ನ ಗಮನಿಸಿದ ತಾಯಿ ಎಡೆ ಎತ್ತಿ ಕಚ್ಚಲು ಬರುವ ಹಾವಿನಿಂದ ಮಗನನ್ನು ಕಾಪಾಡಿಕೊಳ್ಳುತ್ತಾಳೆ.
ಈ ಮೈಜುಮ್ಮೆನಿಸುವ ದೃಶ್ಯಗಳು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಂದಹಾಗೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ನಡೆದಿದೆ.