ಜಿಯೋ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಅಗ್ಗದ 5G ಫೋನ್..
ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ಹೊಸ ಸ್ಮಾರ್ಟ್ಫೋನ್ ನ್ನ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಅದರ ತಯಾರಿಕೆ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ಹೇಳಿದೆ. ಆದರೆ ಫೋನ್ ಬಿಡುಗಡೆ ದಿನಾಂಕವನ್ನ ಇನ್ನೂ ಸ್ಪಷ್ಟಪಡಿಸಿಲ್ಲ. ಕಳೆದ ವರ್ಷ 2021 ರಲ್ಲಿ, ರಿಲಯನ್ಸ್ ಜಿಯೋ ಗೂಗಲ್ ಸಹಯೋಗದೊಂದಿಗೆ ಜಿಯೋ ಫೋನ್ ನೆಕ್ಸ್ಟ್ 4 ಜಿ ಫೋನ್ ಅನ್ನು ಬಿಡುಗಡೆ ಮಾಡಿದೆ.
ದೇಶದಲ್ಲಿ 5G ನೆಟವರ್ಕ್ ನ್ನ ಹೊರತರುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಆದ್ದರಿಂದ ಈಗ ರಿಲಯನ್ಸ್ ಕಂಪನಿ ಕೈಗೆಟುಕುವ 5G ಫೋನ್ ನ್ನ ಬಿಡುಗಡೆ ಮಾಡಲು ಮುಂದಾಗಿದೆ. ಜಿಯೋ ಆಗಸ್ಟ್ 15 ರಿಂದ 5G ಪ್ರಾರಂಭಿಸುವುದಾಗಿ ಘೋಷಿಸಿದೆ.
ಈ ವರ್ಷದ ಅಂತ್ಯದ ವೇಳೆಗೆ ಜಿಯೋ ಫೋನ್ 5G ಅನ್ನು ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ. ಮೊಬೈಲ್ ನ ಅಂದಾಜ ನಿರೀಕ್ಷಿತ ಬೆಲೆ 12,000 ರೂ ಇರಬಹುಹುದು ಎನ್ನಲಾಗಿದೆ. ಮತ್ತೊಂದೆಡೆ ಈ ಫೋನ್ನ ಬೆಲೆ 2,500 ರೂ.ಗಿಂತ ಕಡಿಮೆ ಇರಬಹುದೆಂದು ಹೇಳಲಾಗುತ್ತಿದೆ. ಆದರೆ 5G ಸ್ಮಾರ್ಟ್ಫೋನ್ನ ಇಷ್ಟು ಕಡಿಮೆ ಎಂದು ನಂಬುವುದು ಕಷ್ಟ.
ಜಿಯೋ ಫೋನ್ 5G: ನಿರೀಕ್ಷಿತ ಫೀಚರ್ಸ್ ಗಳು…
ಜಿಯೋ ಫೋನ್ 5G ಯಲ್ಲಿ 6.5-ಇಂಚಿನ HD + IPS LCD ಡಿಸ್ಪ್ಲೇಯನ್ನ ನೀಡುವ ನಿರೀಕ್ಷೆಯಿದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 1600 x 720 ಆಗಿರಬಹುದು.
ಈ ಫೋನ್ ಸ್ನಾಪ್ಡ್ರಾಗನ್ 480 5G SoC ಪ್ರೊಸೆಸರ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. 4 GB RAM 32 GB ಮೆಮೋರಿ ಇದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನ್ನ ಫೋನ್ನಲ್ಲಿ ಕೊಡುವ ನಿರೀಕ್ಷೆಯಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ.
ಜಿಯೋ ಆಂಡ್ರಾಯ್ಡ್ ಫೋನ್ನಲ್ಲಿ ನೀಡಲಾದ ಅದೇ ಓಎಸ್ ಅನ್ನು ಜಿಯೋ ಫೋನ್ 5 ಜಿ ಯಲ್ಲಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ OS ಅನ್ನು Google ಸಹಭಾಗಿತ್ವದಲ್ಲಿ ಮಾಡಲಾಗಿದೆ.