Vijay devarakonda – ಕರಣ್ ನೀಡಿದ್ದ ಬಾಲಿವುಡ್ ಆಫರ್ ತಿರಸ್ಕರಿಸಿದ್ದ ವಿಜಯ್ ದೇವರಕೊಂಡ..
ಟಾಲಿವುಡ್ ನಿಂದ ಬಿಡುಗಡೆಯಾಗುತ್ತಿರುವ ಮತ್ತೊಂದು ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ರೌಡಿ ಹೀರೋ ವಿಜಯ್ ದೇವರಕೊಂಡ ಈ ಮೂಲಕ್ ಬಾಲಿವುಡ್ ಗೆ ಕಾಲಿಡುತ್ತಿದ್ದಾರೆ.
ಪೋಸ್ಟರ್ ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ ಲೈಗರ್ ಟ್ರೇಲರ್ ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಮಾಸ್ ಲುಕ್ ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್ ಗೆ ಜೋಡಿಯಾಗಿ ಬೋಲ್ಡ್ ಲುಕ್ ಅನನ್ಯಾ ಪಾಂಡೆ ನಟಿಸಿದ್ದಾರೆ.
ಸದ್ಯ ಬಾಲಿವುಡ್ ನಲ್ಲಿ ಸೆನ್ಷೇಷನಲ್ ಸ್ಟಾರ್ ದೇವರಕೊಂಡ ಸೆನ್ಷೇಷನ್ ದಿನೇ ದಿನೇ ಹೆಚ್ಚಾಗ್ತಿದೆ.. ಅಂದ್ಹಾಗೆ ಕರಣ್ ಜೋಹರ್ ಜೊತೆಗೆ ಈ ಹಿಂದೆಯೇ ಸಿನಿಮಾ ಮಾಡುವ ಅವಕಾಶ ಬಂದಿದ್ದರೂ ಸಹ ಆಫರ್ ಕೈಬಿಟ್ಟಿದ್ದರಂತೆ ದೇವರಕೊಂಡ.. ಈ ಬಗ್ಗೆ ಅವರೇ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದಾರೆ..
ಅರ್ಜುನ್ ರೆಡ್ಡಿ ಚಿತ್ರದ ಸಕ್ಸಸ್ ನಂತರ ಕರಣ್ ಜೋಹರ್ ಹಲವು ಬಾಲಿವುಡ್ ಸಿನಿಮಾಗಳ ಆಫರ್ ನೀಡಿದ್ದರು.. ಆದರೆ ಆ ಸಮಯದಲ್ಲಿ ನಾನು ಅವರ ಆಫರ್ ಗಳನ್ನ ಒಪ್ಪಲು ಸಿದ್ಧನಾಗಿರಲಿಲ್ಲ. ಈಗ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಇರುವ ಕಾರಣ ಲೈಗರ್ ಚಿತ್ರ ಒಪ್ಪಿಕೊಂಡೆ ಎಂದಿದ್ದಾರೆ..
ಈ ಸಿನಿಮಾ ಮೂಲಕ ವಿಜಯ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕಣಕ್ಕಿಳಿಯಲಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಸಿನಿಮಾ ತೆರೆ ಕಾಣುತ್ತಿದೆ.
ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ಅಭಿನಯಿಸಿದ್ದು ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ಮತ್ತು ಪುರಿ ಕನೆಕ್ಟ್ಸ್ ಬಂಡವಾಳ ಹೂಡಿದ್ದಾರೆ.








